ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮುಂಬರುವಂತ ವಿಧಾನಸಭಾ ಚುನಾವಣೆಗೆ ನಿಲ್ಲೋದಕ್ಕೆ, ಕಾಂಗ್ರೆಸ್ ಪಕ್ಷದ ಟಿಕೆಟ್ ಗಾಗಿ ಅರ್ಜಿ ಸಲ್ಲಿಸುತ್ತೇನೆ. ಆದ್ರೇ ಅನಗತ್ಯ ಕೆಪಿಸಿಸಿಗೆ 2 ಲಕ್ಷ ರೂ ನೀಡುವುದಿಲ್ಲ. ಯಾಕೆ 2 ಲಕ್ಷ ರೂ ನೀಡಬೇಕು ಎಂಬುದಾಗಿ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾನು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಗೆ ಅರ್ಜಿ ಸಲ್ಲಿಸುತ್ತೇನೆ. ಆದ್ರೇ 2 ಲಕ್ಷ ರೂಪಾಯಿ ಕೊಡುವುದಿಲ್ಲ ಎಂದರು.
ಎರಡು ಲಕ್ಷ ಕೊಡುವ ಬಗ್ಗೆ ನಾಯಕರೊಂದಿಗೆ ಮಾತನಾಡುತ್ತೇನೆ. ಕಾಂಗ್ರೆಸ್ ಪಕ್ಷದ ಟಿಕೆಟ್ ಗಾಗಿ ಅರ್ಜಿ ಸಲ್ಲಿಸುತ್ತೇನೆ. ನಮ್ಮಂತ ಪ್ರಾಮಾಣಿಕರು ಯಾಕೆ ಕೆಪಿಸಿಸಿಗೆ 2 ಲಕ್ಷ ಕೊಡಬೇಕು ಎಂದು ಪ್ರಶ್ನಿಸಿದರು.