Tuesday, August 9, 2022

Latest Posts

ಕಾಂಗ್ರೆಸ್ಸಿನದ್ದು ಸಿಡಿ ಮಾಡಿ ಬ್ಲ್ಯಾಕ್ ಮೇಲ್ ಮಾಡೋದೇ ಸಂಸ್ಕೃತಿ: ಯತ್ನಾಳ ಟೀಕೆ

ಹೊಸದಿಗಂತ ವರದಿ, ವಿಜಯಪುರ:

ಕಾಂಗ್ರೆಸ್ಸಿನದ್ದು ಸಿಡಿ ಮಾಡಿ ಬ್ಲ್ಯಾಕ್ ಮೇಲ್ ಮಾಡೋದೇ ಸಂಸ್ಕೃತಿಯಾಗಿದ್ದು, ಈಗ ಅದು ಇಲ್ಲೂ ಮುಂದುವರೆದಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಟೀಕಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿಡಿ ಪ್ರಕರಣ ಎಸ್ ಐಟಿ ಗೆ ನೀಡಿದ್ದು ಸಮಂಜಸವಲ್ಲ. ಇದನ್ನು ಸಿಬಿಐ ಗೆ ನೀಡಬೇಕಿತ್ತು. ಸಿಡಿ ಪ್ರಕರಣ ಎಸ್ ಐಟಿ ಮೇಲೆ ಪ್ರಭಾವ ಬೀರಬಹುದು, ಆದರೆ ಸಿಬಿಐ ಮೇಲೆ ಪ್ರಭಾವ ಬೀರಲು ಆಗಲ್ಲ. ಹೀಗಾಗಿ ಸಿಡಿ ಕೇಸ್ ಗಳನ್ನ ಸಮಗ್ರ ತನಿಖೆಗೆ ಸಿಬಿಐಗೆ ನೀಡಬೇಕು ಎಂದರು.

ಕೆಲವರು ಮಂತ್ರಿ ಸ್ಥಾನ ಪಡೆಯಲು ಸಿನಿಮಾ ತಾರೆಯರನ್ನ ದೆಹಲಿಗೆ ಕರೆದೊಯ್ದಿದ್ದರು. ಅಂತವರೆಲ್ಲ ಈಗ ಮಂತ್ರಿಗಳಾಗಿದ್ದಾರೆ ಎಂದು ಟೀಕಿಸಿದರು.

ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮೇಲೆ ಹಲ್ಲೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಮಮತಾ ಬ್ಯಾನರ್ಜಿ ಸಿಂಪತಿ ಗಿಟ್ಟಿಸಿಕೊಳ್ಳಲು ನಾಟಕ ಮಾಡುತ್ತಿದ್ದಾರೆ. ಮಮತಾಗೆ ಈಗ ಹಿಂದುಗಳ ಶಕ್ತಿ ಅರಿವಾಗಿದೆ. ಹೀಗಾಗಿ ಹಿಂದು ದೇವಾಲಯಗಳಿಗೆ ಅಲೆದಾಡುತ್ತಿರೊ ನಾಟಕವಾಡುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಯತ್ನಾಳ‌ ಏಕಾಂಗಿ ಎನ್ನುವ ವಿಚಾರ ಕುರಿತು ಪ್ರತಿಕ್ರಿಯಿಸಿ, ಧರ್ಮ ಯುದ್ಧದಲ್ಲಿ ಗೆದ್ದಿದ್ದು ಪಾಂಡವರೇ ಹೊರತು ಕೌರವರಲ್ಲ ಎಂದು ಸಿಎಂ ಬಿಎಸ್ ವೈ ಟೀಂ ಗೆ ಕೌರವರು ಅಂತಾ ಪರೋಕ್ಷವಾಗಿ ಟಾಂಗ್ ನೀಡಿದರು.

ಕೌರವರು-ಪಾಂಡವರು ಮದ್ಯೆ ಗೆದ್ದಿದ್ದು ಪಾಂಡವರೆ. ಹಾಗೇ ರಾಮ ಒಬ್ನೇ ಇದ್ದ ಆದ್ರೆ ರಾವಣನಂತ ದೊಡ್ಡ ರಾಕ್ಷನನ್ನೇ ಸಂಹಾರ ಮಾಡಿದ. ನಾನೂ ರಾಮನ ಹಾಗೇ, ರಾವಣನಂತವರಿಗೆ ಹೆದರಲ್ಲ. ಕೊನೆಗೆ ಗೆದ್ದಿದ್ದು ರಾಮನೆ, ಹಾಗೆ ಯತ್ನಾಳ ನೂ ಗೆಲ್ತಾನೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss