spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದೀನ ದಲಿತರಿಗೆ, ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ನಿಂದ ಅನ್ಯಾಯ: ಸಚಿವ ಗೋವಿಂದ ಕಾರಜೋಳ

- Advertisement -Nitte

ಹೊಸ ದಿಗಂತ ವರದಿ, ವಿಜಯಪುರ:

ದೇಶದಲ್ಲಿ 75 ವರ್ಷಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್, ದಿನ ದಲಿತರಿಗೆ ಹಾಗೂ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿದೆ ಎಂದು ಸಚಿವ ಗೋವಿಂದ ಕಾರಜೋಳ ದೂರಿದರು.
ಜಿಲ್ಲೆಯ ಸಿಂದಗಿಯಲ್ಲಿ ಶನಿವಾರ ಮಾತನಾಡಿ, ಬಿಜೆಪಿಗೆ ಎರಡು ಬಾರಿ ಲೋಕಸಭೆಯಲ್ಲಿ ಸ್ಪಷ್ಟ ಬಹುಮತ ನೀಡಿ ಜನರು ಆಯ್ಕೆ ಮಾಡಿದ್ದಾರೆ. ಕಾಂಗ್ರೆಸ್ ಮಾಡಿದ ಅನ್ಯಾಯದ ವಿರುದ್ಧ ಈ ಬಾರಿ ಜನರು ಅವರಿಗೆ ಮತ್ತೆ ಉತ್ತರ ಕೊಡಲಿದ್ದಾರೆ ಎಂದರು.

ಪಕ್ಷದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಗುಲಾಂನಬಿ ಆಜಾದ್ ಅವರಿಗೆ ಅವಕಾಶ ತಪ್ಪಿಸಲಾಗಿದೆ. ರೋಷನ್ ಬೇಗ್, ತನ್ವೀರ್ ಸೇಠ್ ಸೇರಿದಂತೆ ಹಲವರನ್ನು ಮೂಲೆಗುಂಪು ಮಾಡಿದ್ದಾರೆ ಎಂದು ಆರೋಪಿಸಿದರು.

ಅಂಬೇಡ್ಕರ್ ಅವರನ್ನು ಸೋಲಿಸಿದವರು ಕಾಂಗ್ರೆಸ್ ನವರು. ಜವಹರಲಾಲ್‌ ನೆಹರು ಅವರು ಅಂದು ಲೋಕಸಭೆಗೆ ಬಾರದಂತೆ ನೋಡಿಕೊಂಡರು. ಬಾಬು ಜಗಜೀವನ ರಾಮ್ ಅವರು ಮುಂದಿನ ಪ್ರಧಾನಿ ಎಂದು ವಾಜಪೇಯಿ ಹೇಳಿದಾಗ ಮೋಸ ಮಾಡಿದವರು ಇಂದಿರಾ ಗಾಂಧಿಯವರು, ಹೀಗೆ ಅಲ್ಪಸಂಖ್ಯಾತರು ಹಾಗೂ ದಲಿತರನ್ನು ಬರಿ ಓಟಬ್ಯಾಂಕ್ ಮಾಡಿಕೊಂಡು ರಾಜಕೀಯ ಮಾಡಿದ್ದು ಕಾಂಗ್ರೆಸ್ ಎಂದರು.

ಕರ್ನಾಟಕದಲ್ಲಿ ಖರ್ಗೆ ಅವರು 11 ಬಾರಿ ಗೆದ್ದಿದ್ದರೂ ಅವರನ್ನು ಕಾಂಗ್ರೆಸ್ ಸಿಎಂ ಮಾಡಲಿಲ್ಲ. ಜಿ. ಪರಮೇಶ್ವರ ಸಿಎಂ ಆಗ್ತಾರೆ ಅಂತ ಕುತಂತ್ರ ಮಾಡಿ ಕಾಂಗ್ರೆಸ್ ಅವರನ್ನು ಸೋಲಿಸಿತು ಎಂದರು.

ಓಟಬ್ಯಾಂಕ್ ಮಾಡಿಕೊಂಡು ವಂಚಿಸುತ್ತ ಆಡಳಿತ ಮಾಡುವ ಕಾಲ ಮುಗಿದು ಹೋಯ್ತು, ಈಗ ಎಲ್ಲರೂ ಎಚ್ಚೆತ್ತಿದ್ದಾರೆ. ಏಳು ವರ್ಷದ ಹಿಂದೆ ಮೋದಿ ಸಬ್ ಕಾ ಸಾಥ್ ಎಂದು ಹೇಳಿದ್ದರು. ಅದರಂತೆ ಇಂದು ಎಲ್ಲರನ್ನು ಜೊತೆಗೂಡಿಸಿಕೊಂಡು ಮುನ್ನೆಡೆಯುವ ಕೆಲಸ ಮಾಡುತ್ತಿದ್ದಾರೆ ಎಂದರು.

25,000 ಮತದಿಂದ ಬಿಜೆಪಿ ಸಿಂದಗಿಯಲ್ಲಿ ಗೆದ್ದರೆ, 20,000 ಅಧಿಕ ಮತಗಳ ಅಂತರದಿಂದ ಹಾನಗಲ್ ನಲ್ಲಿ ಬಿಜೆಪಿ ಗೆಲವು ಸಾಧಿಸಲಿದೆ ಎಂದರು.

ಏಳು ವರ್ಷಗಳ ಪ್ರಧಾನಿ ಮೋದಿ ಅವರ ಸಾಧನೆ. ರಾಜ್ಯ ಸರ್ಕಾರದ ಸಾಧನೆಗಳೊಂದಿಗೆ ಮತಯಾಚನೆ ಮಾಡುತ್ತೇವೆ ಎಂದರು.

ಕುಮಾರಸ್ವಾಮಿ ಟ್ವಿಟರ್ ವಿಚಾರ ಕುರಿತು ಪ್ರತಿಕ್ರಿಯಿಸಿ, ಜಾಫರ್ ಶರೀಫ್ ಮೊಮ್ಮಗ, ತನ್ವೀರ್ ಶೇಠ್, ಇಕ್ಬಾಲ್ ಅಹ್ಮದ್ ಸರಡಗಿ ಸೇರಿದಂತೆ ಇತರ‌‌ ಅಲ್ಪ ಸಂಖ್ಯಾತ ನಾಯಕರನ್ನು ಕಾಂಗ್ರೆಸ್ ಹತ್ತಿಕ್ಕಿದೆ ಎಂದರು.

ಸಿಎಂ ಇಬ್ರಾಹಿಂ ಹೇಳಿಕೆ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ಸಿಎಂ ಇಬ್ರಾಹಿಂ ಸತ್ಯವನ್ನೇ ಹೇಳಿದ್ದಾರೆ. ಸಂದರ್ಭಕ್ಕೆ ತಕ್ಕ ಹಾಗೆ ಆಗಾಗ ಸಿಎಂ ಇಬ್ರಾಹಿಂ ಸತ್ಯ ಹೇಳುತ್ತಾರೆ. ಸಿದ್ದರಾಮಯ್ಯ ಓಟಬ್ಯಾಂಕ್ ಮಾಡೋದಕ್ಕೆ ಮಾತ್ರ ಅಹಿಂದ ಹಾಗೂ ಅಲ್ಪ ಸಂಖ್ಯಾತರನ್ನು ಬಳಸಿಕೊಂಡಿದ್ದಾರೆ. ಅವರನ್ನು ಬಳಸಿಕೊಂಡು ಮೇಲೆ ಬಂದ ಬಳಿಕ ಏಣಿ ಒದೆಯುವ ಕೆಲಸ ಮಾಡಿದ್ದಾರೆ. ಇನ್ನೊಂದು ವರ್ಷದಲ್ಲಿ ಕಾಂಗ್ರೆಸ್ ದಿವಾಳಿಯಾಗಲಿದೆ ಎಂದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss