ಪ್ರಕರಣ ಮುಚ್ಚಿಹಾಕುವಲ್ಲಿ ಸಿದ್ಧಹಸ್ತರಾದ ಕಾಂಗ್ರೆಸ್ಸಿಗರು ಈಗ ನಮ್ಮ ಮೇಲೆ ಆರೋಪಿಸುತ್ತಿದ್ದಾರೆ; ಸಿಎಂ ವಾಗ್ದಾಳಿ

ಹೊಸದಿಗಂತ ವರದಿ, ವಿಜಯನಗರ
ಸಂತೋಷ್ ಹತ್ಯೆ ಪ್ರಕರಣದ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದೆ, ಹೀಗಿರುವಾಗ ನಿರ್ಗಮಿತ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಬಂಧಿಸುವುದು, ಬಿಡುವುದು ತನಿಖಾಧಿಕಾರಿಗಳಿಗೆ ಬಿಟ್ಟಿದ್ದು, ಪೊಲೀಸರ ಕೆಲಸವನ್ನು ನಾವು ಮಾಡೋಕೆ ಆಗೋಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹೇಳಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆದ ಸಮಾರಂಭದ ಬಳಿಕ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ತನಿಖಾಧಿಕಾರಿಗಳು ತಮ್ಮ ಕೆಲಸ ಮಾಡುತ್ತಿದ್ದು, ಸತ್ಯ ಮರೆಮಾಚಲು ಸಾಧ್ಯವೇ ಇಲ್ಲ. ತನಿಖೆ‌ವೇಳೆ ಎಲ್ಲವೂ ಬಯಲಾಗಲಿದೆ. ಈ ಹಿಂದೆ ಎಸ್.ಕೆ.ಜಾರ್ಜ್ ಮೇಲೆ ಕೇಳಿಬಂದ ಆರೋಪದಲ್ಲಿ ಅವರ ಹೆಸರು ಸ್ಪಷ್ಟವಾಗಿದ್ದರೂ ಎಫ್ಐಆರ್ ನಲ್ಲಿ ಅವರ ಹೆಸರನ್ನು ಹಾಕಲಿಲ್ಲ.
ಆದರೆ ಬೀಜೆಪಿ ಸರ್ಕಾರ ಪ್ರಾಮಾಣಿಕವಾಗಿದೆ. ಹಾಗಾಗಿ ತನಿಖೆಯ ಮೇಲೆ ಪ್ರಭಾವ ಬೀರಿಲ್ಲ. ನಮ್ಮ ಮೇಲೆ ಸುಳ್ಳು ಆರೋಪ ಮಾಡುವ, ಜನರ ವಿಶ್ವಾಸ ಕಳೆದುಕೊಂಡಿರುವ ಕಾಂಗ್ರೆಸ್ ನವರು ಅಂದು ನ್ಯಾಯಾಲಯದ ಆದೇಶದ ಬಳಿಕ ಎಸ್.ಕೆ.ಜಾರ್ಜ್ ಅವರ ಹೆಸರನ್ನು ಹಾಕಿದ್ದರು ಎಂದು ಕೈ‌ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಎಸ್.ಕೆ.ಜಾರ್ಜ್ ಪ್ರಕರಣದಲ್ಲಿ ಅವರನ್ನು ಮುಚ್ಚಿಹಾಕುವ ಪ್ರಯತ್ನ ಮಾಡಿದರು. ಪ್ರಕರಣ ಮುಚ್ಚಿಹಾಕುವ ಕಲೆ ಸಿದ್ಧಿಸಿದೆ. ನಾವು ಅಂತಹ ನೀಚ ಕೆಲಸ ಮಾಡೋಲ್ಲ, ಅಂತಹ ಸಂಸ್ಕೃತಿ ನಮ್ಮದಲ್ಲ, ತನಿಖಾಧಿಕಾರಿಗಳು ಅವರ ಕೆಲಸ ಮಾಡಲಿದ್ದಾರೆ, ಅದರಲ್ಲಿ ನಮ್ಮ ಹಸ್ತಕ್ಷೇಪವಿಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!