Thursday, August 11, 2022

Latest Posts

ವಿಧಾನಪರಿಷತ್ ನಲ್ಲೂ ಕರ್ನಾಟಕ ಧಾರ್ಮಿಕ ಕಟ್ಟಗಳ ಸಂರಕ್ಷಣೆ ವಿಧೇಯಕ ಅಂಗೀಕಾರ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ವಿಸ್ತೃತ ಚರ್ಚೆಯ ನಂತರ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ಕರ್ನಾಟಕ ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ವಿಧೇಯಕಕ್ಕೆ ವಿಧಾನ ಪರಿಷತ್ ಧ್ವನಿಮತದ ಮೂಲಕ ಅಂಗೀಕಾರ ನೀಡಿತು.
ಪರಿಷತ್‌ ಕಲಾಪದಲ್ಲಿ ವಿಧೇಯಕ ಮಂಡಿಸಿದ ಕಾನೂನು ಸಚಿವ ಮಾಧುಸ್ವಾಮಿ, ಸಾರ್ವಜನಿಕ‌ ಸ್ಥಳದಲ್ಲಿರುವ ಧಾರ್ಮಿಕ ಕಟ್ಟಡಗಳ ತೆರವು ಪ್ರಕರಣ ಸುಪ್ರೀಂಕೋರ್ಟ್ ಮುಂದೆ ಬಾಕಿ ಇದೆ. ನಾವು ಯಾವುದೇ ಧರ್ಮದ ಧಾರ್ಮಿಕ ಕಟ್ಟಡವನ್ನು ಸಕ್ರಮ ಮಾಡುವ ಅಂಶ ಈ ವಿಧೇಯಕದಲ್ಲಿ ತರುತ್ತಿಲ್ಲ.ಮುಂದಿನ ನಿರ್ಧಾರ ಕೈಗೊಳ್ಳುವವರೆಗೂ ಸಾರ್ವಜನಿಕ ಸ್ಥಳದಲ್ಲಿ ಇರುವ ಎಲ್ಲಾ ಧಾರ್ಮಿಕ ಕಟ್ಟಡಗಳಿಗೆ ರಕ್ಷಣೆ ಕೊಡಬೇಕು ಎಂದು ವಿಧೇಯಕ ತರಲಾಗಿದೆ ಎಂದು ಮಾಹಿತಿ ನೀಡಿದರು.
2009ರ ನಂತರದ ಧಾರ್ಮಿಕ ಕಟ್ಟಡಗಳ ತೆರವಿಗೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಸದ್ಯ ಪ್ರಕರಣ ಸುಪ್ರೀಂಕೋರ್ಟ್ ಮುಂದೆ ಅಂತಿಮ ತೀರ್ಪು ಬರುವುದು ಬಾಕಿ ಇದೆ.ಅಧಿಕಾರಿಗಳು ಕೋರ್ಟ್ ಆದೇಶ ಎಂದು ಧಾರ್ಮಿಕ ಕಟ್ಟಡಗಳನ್ನು ಒಡೆಯುತ್ತಿದ್ದಾರೆ. ಇದಕ್ಕೆ ತಡೆ ನೀಡಲು ಮಾತ್ರ ಕಾಯ್ದೆ ತರಲಾಗುತ್ತಿದೆ. ಸಮಾಜದಲ್ಲಿ ಏರುಪೇರಾಗಬಾರದು ಎನ್ನುವುದು ಇದರ ಉದ್ದೇಶ. ಹಾಗಾಗಿ, ಬಿಲ್ ಪಾಸ್ ಮಾಡಿ ಎಂದು ಮನವಿ ಮಾಡಿದರು.
ವಿಸ್ತೃತ ಚರ್ಚೆಯ ನಂತರ ಎಲ್ಲ ಸದಸ್ಯರು ವಿಧೇಯಕಕ್ಕೆ ಸಹಮತ ವ್ಯಕ್ತಪಡಿಸಿದರು. ಅಂತಿಮವಾಗಿ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ಕರ್ನಾಟಕ ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ವಿಧೇಯಕಕ್ಕೆ ವಿಧಾನ ಪರಿಷತ್ ಧ್ವನಿಮತದ ಮೂಲಕ ಅಂಗೀಕಾರ ನೀಡಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss