spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸಂವಿಧಾನ ದಿನ- ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೇ ನರೇಂದ್ರ ಮೋದಿ ಅನುಷ್ಠಾನಕ್ಕೆ ತಂದ ಕಾರ್ಯಕ್ರಮ

- Advertisement -Nitte

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಪ್ರಜೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಂವಿಧಾನ ದಿನದ ಶುಭಾಶಯ ತಿಳಿಸಿದ್ದಾರೆ.
ಈ ವಿಶೇಷ ದಿನದಂದು ಪ್ರಧಾನಿ ಮೋದಿಯವರು ಟ್ವಿಟರ್‌ನಲ್ಲಿ ಡಾ. ಅಂಬೇಡ್ಕರ್ ಅವರ ಭಾಷಣದ ಭಾಗವೊಂದನ್ನು ಹಂಚಿಕೊಂಡಿದ್ದು, ನವೆಂಬರ್ 4, 1948ರಂದು ಸಂವಿಧಾನ ರಚನೆ ಸಭೆಯಲ್ಲಿ ಭಾರತದ ಸಂವಿಧಾನವನ್ನು ಅಂಗೀಕರಿಸಲಾದ ಅಂಶದ ಬಗ್ಗೆ ಉಲ್ಲೇಖಿಸಲಾಗಿದೆ.

 

ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ರಾಜೇಂದ್ರ ಪ್ರಸಾದ್ ಅವರ ಹಿತೋಪದೇಶದ ಮಾತುಗಳನ್ನು ಹಂಚಿಕೊಂಡಿದ್ದಾರೆ. ‘ಯಾವುದೇ ಸಂವಿಧಾನವು ಎಷ್ಟೇ ಸುಂದರ, ಸುವ್ಯವಸ್ಥಿತ ಮತ್ತು ಬಲಿಷ್ಠವಾಗಿರಲಿ, ಅದರ ಅನುಷ್ಠಾನಕ್ಕೆ ದೇಶದಲ್ಲಿ ನಿಜವಾದ, ನಿರ್ಭೀತ, ನಿಸ್ವಾರ್ಥ ಸೇವಕರು ಇಲ್ಲದಿದ್ದರೆ ಸಂವಿಧಾನ ಏನನ್ನೂ ಮಾಡಲು ಸಾಧ್ಯವಿಲ್ಲ’. ಇದು ಡಾ. ರಾಜೇಂದ್ರ ಪ್ರಸಾದ್ ಅವರ ಮಾತುಗಳು. ಇವು ಇಂದಿಗೂ ಪ್ರಸ್ತುತ ಹಾಗೂ ನಮಗೆಲ್ಲರಿಗೂ ಮಾರ್ಗದರ್ಶಿಯಂತಿದೆ ಎಂದಿದ್ದಾರೆ.

1949 ರಲ್ಲಿ ಭಾರತದ ಸಂವಿಧಾನವನ್ನು ಸಂಸತ್ತಿನಲ್ಲಿ ಅಂಗೀಕಾರ ಮಾಡಿದ ಸ್ಮರಣಾರ್ಥ ಪ್ರತಿವರ್ಷವೂ ನವೆಂವರ್ 26ರನ್ನು ಸಂವಿಧಾನ ದಿನವನ್ನಾಗಿ ಆಚರಿಸಲಾಗುತ್ತದೆ. ಜನವರಿ 26, 1950ರಂದು ಸಂವಿಧಾನವು ಜಾರಿಗೆ ಬಂದಿತು.

ಸಂವಿಧಾನದ ಮಹತ್ವ ಸಾರಲು, ಭಾರತದ ಮೊದಲ ಕಾನೂನು ಸಚಿವ ಭೀಮ್ ರಾವ್ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಲು 2015ರಿಂದ ಸಂವಿಧಾನ ದಿನ ಆಚರಣೆ ಆರಂಭವಾಯಿತು. ಇದಕ್ಕೂ ಮುನ್ನ 2010 ರಲ್ಲಿ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಸಂವಿಧಾನ ಗೌರವ ಯಾತ್ರೆಯನ್ನು ನಡೆಸಿದ್ದನ್ನೂ ಇಲ್ಲಿ ಸ್ಮರಿಸಬಹುದು.

ಇಂದು ಪ್ರಧಾನಿ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ರಾಷ್ಟ್ರಪತಿಗಳು ಸಂವಿಧಾನದ ಪ್ರಸ್ತಾವನೆಯನ್ನು ಓದಲಿದ್ದು, ಸಂವಿಧಾನ ಸಭೆಯ ಡಿಜಿಟಲ್ ಸ್ವರೂಪ ಹಾಗೂ ತಿದ್ದುಪಡಿಗಳನ್ನು ಒಳಗೊಂಡ ಸಂವಿಧಾನದ ಕ್ಯಾಲಿಯೋಗ್ರಾಫ್ ಕಾಪಿಯನ್ನು ಬಿಡುಗಡೆ ಮಾಡಲಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss