ಮೊನ್ನೆ ಹಂಗೆ, ನಿನ್ನೆ ಹಿಂಗೆ…ಶಿವಸೇನೆ ವಿಚಾರದಲ್ಲಿ ಇಸಿ ನಿರ್ಧಾರಕ್ಕೆ ಶರದ್ ಪವಾರ್ ಡಬಲ್ ಕಮೆಂಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇತ್ತೀಚೆಗೆ ಶಿವಸೇನೆ ಪಕ್ಷದ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಕೈಗೊಂಡ ನಿರ್ಧಾರದ ಬಗ್ಗೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಪ್ರತಿಕ್ರಿಯಿಸಿದ್ದಾರೆ. ಏಕನಾಥ್ ಶಿಂಧೆ ಅವರ ಬಣಕ್ಕೆ ಪಕ್ಷದ ಹೆಸರು, ಬಿಲ್ಲು-ಬಾಣ ಚಿಹ್ನೆಯನ್ನು ನಿಗದಿಪಡಿಸುವಲ್ಲಿ ಅವರು ತಪ್ಪು ಮಾಡಿದ್ದಾರೆ. ಈ ಹಿಂದೆ ಚುನಾವಣಾ ಆಯೋಗ ಇಂತಹ ನಿರ್ಧಾರ ಕೈಗೊಂಡಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಉದ್ಧವ್ ಠಾಕ್ರೆ ಅವರಿಗೆ ಜನರ ಬೆಂಬಲವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉದ್ಧವ್ ಠಾಕ್ರೆ ಅವರ ನಿರ್ಧಾರವನ್ನು ಅಂಗೀಕರಿಸಿ ಹೊಸ ಚಿಹ್ನೆಯನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು. ಆದರೆ ನಾಲ್ಕು ದಿನಗಳ ನಂತರ ಚುನಾವಣಾ ಆಯೋಗದ ನಿರ್ಧಾರವನ್ನೇ ತಪ್ಪೆಂದು, ಉದ್ಧವ್ ಬೆಂಬಲಕ್ಕೆ ನಿಂತಿರುವುದು ಗಮನಾರ್ಹ. ಇದಕ್ಕೆ ಪ್ರತಿಕ್ರಿಯಿಸಿದ ಪವಾರ್, ಯಾವುದೇ ಪಕ್ಷದಲ್ಲಿ ರಾಜಕೀಯ ಅಸಮಾಧಾನ ಮತ್ತು ಒಡಕು ಇರುತ್ತದೆ. ಆದರೆ, ಪಕ್ಷ ಮತ್ತು ಪಕ್ಷದ ಚಿಹ್ನೆ ಕೈವಶವಾಗುವ ಪ್ರಸಂಗ ಬಂದಿರಲಿಲ್ಲ “ಇಸಿಗೆ ನಿಜವಾಗಿಯೂ ಈ ಬಗ್ಗೆ ತೀರ್ಪು ನೀಡುವ ಅಧಿಕಾರವಿದೆಯೇ ಎಂಬುದು ನನ್ನ ಪ್ರಶ್ನೆ” ಎಂದರು.

ಪವಾರ್ ಅವರು ಕಾಂಗ್ರೆಸ್ ಪಕ್ಷವನ್ನು ತೊರೆದಾಗ ಪಕ್ಷ ತನಗೆ ಸೇರಿದ್ದು ಎಂದು ಯಾವುದೇ ಹೇಳಿಕೆ ನೀಡಿರಲಿಲ್ಲ ಎಂದು ನೆನಪಿಸಿದರು. ದೇಶದ ಇತಿಹಾಸದಲ್ಲಿ ಇಂತಹ ಘಟನೆ ನಡೆದಿಲ್ಲ ಎಂಬ ಇತ್ತೀಚಿನ ಬೆಳವಣಿಗೆ ಅಚ್ಚರಿ ಮೂಡಿಸಿದೆ. ಇಂತಹ ಸಂದರ್ಭಗಳಲ್ಲಿ ಜನರು ಸಹಜವಾಗಿಯೇ ಅನ್ಯಾಯಕ್ಕೊಳಗಾದ ಪಕ್ಷದ ಪರ ನಿಲ್ಲುತ್ತಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!