spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಇನ್ಮುಂದೆ ದಾಳಿಂಬೆಹಣ್ಣು ಮಾತ್ರವಲ್ಲ, ಅದರ ಎಲೆಯನ್ನೂ ಸೇವಿಸಿ…ಏಕೆ ಗೊತ್ತಾ?

- Advertisement -Nitte

ದಾಳಿಂಬೆ ಹಣ್ಣು ದೇಹಕ್ಕೆ ಪೋಷಕಾಂಶ ನೀಡುವುದರ ಜೊತೆಗೆ ವಿಟಮಿನ್ಸ್ ಗಳು ಒದಗಿಸುತ್ತದೆ. ಪ್ರತಿ ಹಣ್ಣುಗಳಲ್ಲಿಯೂ ಬೀಜ, ಸಿಪ್ಪೆ ಸೇರಿದಂತೆ ಎಲ್ಲಾ ಭಾಗಗಳಲ್ಲೂ ಔಷಧೀಯ ಅಂಶಗಳಿರುತ್ತವೆ. ದಾಳಿಂಬೆ ಹಣ್ಣು ಮಾತ್ರವಲ್ಲ ಅದರ ಎಲೆಗಳಲ್ಲಿಯೂ ಇದೆ ಸಾಕಷ್ಟು ಪ್ರಯೋಜನಗಳಿವೆ. ಇನ್ಮುಂದೆ ಹಣ್ಣಿನ ಜೊತೆ ಎಲೆಯನ್ನೂ ಸೇವಿಸಿ.

ಕೆಮ್ಮು- ಕಫ:
ದಾಳಿಂಬೆ ಎಲೆಯಲ್ಲಿ ರೋಗ ನಿರೋಧಕ ಶಕ್ತಿ ಇದ್ದು, ಇದರ ಕಷಾಯ ಮಾಡಿ ಸೇವಿಸುವುದರಿಂದ ಕೆಮ್ಮು- ಕಫ ನಿವಾರಣೆಯಾಲಿದೆ.

ನಿದ್ರಾಹೀನತೆ:
ದಾಳಿಂಬೆ ಎಲೆಯನ್ನು ಅರಿದು ಅದನ್ನು ನೀರಿನಲ್ಲಿ ಕುದಿಸಿಕೊಂಡು ರಾತ್ರಿ ಊಟದ ಬಳಿಕ ಸೇವಿಸುವುದರಿಂದ ನಿದ್ರಾಹೀನತೆ ಕಡಿಮೆಯಾಗುತ್ತದೆ.

ತುರಿಕೆ:
ದಾಳಿಂಬೆ ಎಲೆಯನ್ನು ಅರಿದು ಅದನ್ನು ದಪ್ಪ ಲೇಪನ ಮಾಡಿ ತುರಿಕೆ ಇರುವ ಭಾಗಕ್ಕೆ ಹಚ್ಚಿ. ಬಳಿಕ ಇದನ್ನು ಒಣಗಲು ಬಿಡಿ. ಹೀಗೆ ದಿನಕ್ಕೆ 2 ಬಾರಿ ಮಾಡುವುದು ಪರಿಣಾಮಕಾರಿಯಾಗಲಿದೆ.

ಮೊಡವೆ:
ದಾಳಿಂಬೆ ಎಲೆಯನ್ನು ಅರಿದು ರಾತ್ರಿ ಮಲಗುವ ಮುನ್ನ ಮೊಡವೆಗಳ ಮೇಲೆ ಹಚ್ಚುವುದರಿಂದ ಮೊಡವೆ ದೂರವಾಗುತ್ತದೆ.

ಹೊಟ್ಟೆ ನೋವು:
ದಾಳಿಂಬೆ ಎಲೆಯನ್ನು ಪುಡಿ ಮಾಡಿ ಇದರಿಂದ ಚಹಾ ಮಾಡಿ ಸೇವಿಸುವುದರಿಂದ ಹಟ್ಟೆ ನೋವು ಕಡಿಮೆಯಾಗುತ್ತದೆ.

ಬಾಯಿ ಹುಣ್ಣು:
ದಾಳಿಂಬೆ ಎಲೆಯನ್ನು ಕುದಿಸಿ ಅದರ ನೀರನ್ನು ನಿಧಾನವಾಗಿ ಕುಡಿಯುವುದರಿಂದ ಬಾಯಿ ಹುಣ್ಣು ಕಡಿಮೆಯಾಗುತ್ತದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss