ಗ್ರಾಹಕರೇ ಗಮನಿಸಿ: ಜ. 30 ರಿಂದ ಎರಡು ದಿನ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜನವರಿ 30 ಮತ್ತು 31 ರಂದು ಬ್ಯಾಂಕ್ ಯೂನಿಯನ್‌ ಗಳು ತಮ್ಮ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಎರಡು ದಿನಗಳ ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿರುವುದರಿಂದ ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಆದರೆ, ಶುಕ್ರವಾರ ಭಾರತೀಯ ಬ್ಯಾಂಕ್‌ ಗಳ ಸಂಘವು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್(ಯುಎಫ್‌ಬಿಯು) ನೊಂದಿಗೆ ಸಂಧಾನ ಸಭೆ ನಡೆಸಲಿದ್ದು, ಹೀಗಾಗಿ ಮುಷ್ಕರದ ಸ್ಥಿತಿ ಅಂತಿಮವಾಗಿ ತಿಳಿಯಲಿದೆ.

ಜನವರಿ 24 ರಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಜನವರಿ 30-31 ರಂದು ಯೂನಿಯನ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ ಕರೆದಿರುವ ಎರಡು ದಿನಗಳ ಅಖಿಲ ಭಾರತ ಮುಷ್ಕರದಿಂದಾಗಿ ತನ್ನ ಶಾಖೆಗಳಲ್ಲಿ ಸಾಮಾನ್ಯ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು ಎಂದು ಸ್ಟಾಕ್ ಎಕ್ಸ್ಚೇಂಜ್ ಗಳಿಗೆ ತಿಳಿಸಿದೆ.

ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್(UFBU) ಮುಷ್ಕರದ ಸೂಚನೆಯನ್ನು ನೀಡಿದೆ ಎಂದು ಭಾರತೀಯ ಬ್ಯಾಂಕ್‌ಗಳ ಅಸೋಸಿಯೇಷನ್ (IBA) ನಮಗೆ ಸಲಹೆ ನೀಡಿದೆ, UFBU ನ ಘಟಕ ಒಕ್ಕೂಟಗಳಾದ AIBEA, AIBOC, NCBE, AIBOA, BEFI, INBEF ಮತ್ತು INBOC ಗಳು ತಮ್ಮ ಬೇಡಿಕೆಗಳನ್ನು ಬೆಂಬಲಿಸಿ 2023 ರ ಜನವರಿ 30 ಮತ್ತು 31 ರಂದು ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರವನ್ನು ನಡೆಸಲು ಪ್ರಸ್ತಾಪಿಸಿವೆ ಎಂದು ಎಸ್‌ಬಿಐ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!