Sunday, August 14, 2022

Latest Posts

ಪಾಕಿಸ್ತಾನದ ISI ಅಧಿಕಾರಿ ಜೊತೆ ಸಂಪರ್ಕ: ಬೆಂಗಳೂರಿನ ಬಟ್ಟೆ ವ್ಯಾಪಾರಿಯ ಬಂಧನ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಬೆಂಗಳೂರು ಸಿಸಿಬಿ ಮತ್ತು ಮಿಲಿಟರಿ ಗುಪ್ತಚರದ ದಕ್ಷಿಣ ಕಮಾಂಡೊ ಟೀಂ ಬೆಂಗಳೂರಿನ ಕಾಟನ್ ಪೇಟೆಯ ಜಾಲಿ ಮಹೊಲ್ಲಾದಲ್ಲಿ ಆಪರೇಶನ್ ನಡೆಸಿದ್ದು, ಆರೋಪಿ ಜಿತೆಂದರ್ ಸಿಂಗ್ ಎಂಬಾತನನ್ನು ಬಂಧಿಸಿದ್ದಾರೆ.
ಈತ ಮೂಲತಃ ಭಾರತದ ಗಡಿಯಾದ ರಾಜಸ್ಥಾನದ ಬಾರ್ಮೆರ್ ನವನು. ಬೆಂಗಳೂರಿನಲ್ಲಿ ಬಟ್ಟೆ ವ್ಯಾಪಾರಿಯಾಗಿ ಕೆಲಸ ಮಾಡುತ್ತಿದ್ದ ಆರೋಪಿ. ಈತ ಪಾಕಿಸ್ತಾನದ ISI ಅಧಿಕಾರಿ ಜೊತೆ ಸಂಪರ್ಕ ಹೊಂದಿದ್ದ ಎಂಬ ಆರೋಪ ಕೇಳಿಬಂದಿದೆ.
ಆರ್ಮಿ ಕಮಾಂಡೊ ಯುನಿಫಾರ್ಮ್ ಧರಿಸಿ ಆಪರೇಟ್ ಮಾಡ್ತಿದ್ದ ಆರೋಪಿ ಜಿತೆಂದರ್ ಸಿಂಗ್ ವಾಟ್ಸ್ ಆಪ್ ವಿಡಿಯೋ, ವಾಟ್ಸ್ ಆಪ್ ಮೆಸೆಜ್, ವಾಟ್ಸ್ ಆಪ್ ಕಾಲ್ ಮೂಲಕ ಸಂಪರ್ಕ ಹೊಂದಿದ್ದ. ಈತ ಬಾರ್ಮೆರ್ ಮಿಲಿಟರಿ ಸ್ಟೆಶನ್ ಹಾಗೂ ಮಿಲಿಟರಿ ವಾಹನಗಳ ಓಡಾಟದ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಂಡಿದ್ದ ಎನ್ನಲಾಗಿದೆ.
ಭಾರತೀಯ ಸೇನೆಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಗಡಿ ಪ್ರದೇಶದ ಫೋಟೊಗಳನ್ನು ಈತ ರವಾನಿಸುತ್ತಿದ್ದ. ಭಾರತೀಯ ಸೇನೆಯ ಯೂನಿಫಾರ್ಮ್ ಹಾಕಿಕೊಂಡು ತಾನೂ ಕಮಾಂಡೊ ಅಂತ ಗುರುತಿಸಿಕೊಂಡು ಕೃತ್ಯ ಎಸಗಿದ್ದಾನೆ. ಈತ ಬಾರ್ಮೆರ್ ಮಿಲಿಟರಿ ಸ್ಟೆಶನ್ ಹಾಗೂ ಮಿಲಿಟರಿ ವಾಹನಗಳ ಓಡಾಟದ ಬಗ್ಗೆ ಮಾಹಿತಿ ನೀಡಿದ್ದ.
ಮಿಲಿಟರಿ ಇಂಟೆಲಿಜೆನ್ಸ್ ಮಾಹಿತಿ ಮೇಲೆ ಬೆಂಗಳೂರು‌ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿ ಜಿತೆಂದರ್ ಸಿಂಗ್ ದೇಶದ ಆಯಕಟ್ಟಿನ ಸ್ಥಳಗಳು, ಕಟ್ಟಡ, ರಕ್ಷಣಾ ಸಂಸ್ಥೆಯ ಫೋಟೋ ತೆಗೆಯುತ್ತಿದ್ದ. ಈತ ರಾಜಸ್ಥಾನ ಮೂಲದ ವ್ಯಕ್ತಿ. ತಾನು ತೆಗೆದ ಫೋಟೋಗಳನ್ನು ವಿದೇಶಿ ಏಜೆನ್ಸಿಗಳಿಗೆ ಕಳುಹಿಸಿದ್ದ.
ಆರೋಪಿ ದೇಶದ ಬೇರೆ ಬೇರೆ ಕಡೆಗಳಲ್ಲಿ ಕುಕೃತ್ಯ ಎಸಗಿದ್ದ ಎಂದು ತಿಳಿದುಬಂದಿದೆ. ಆದರೆ ಕರ್ನಾಟಕದಲ್ಲಿ ಈ ಕೃತ್ಯ ನಡೆಸಿರಲಿಲ್ಲ. ಬೇರೆ ಕಡೆ ಕೃತ್ಯ ಮಾಡಿಬಂದು ಬೆಂಗಳೂರಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅಫಿಶಿಯಲ್ ಸೀಕ್ರೆಟ್‌ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss