ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, August 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಚಾಲಕನ ನಿಯಂತ್ರಣ ತಪ್ಪಿದ ಕಂಟೈನರ್ ಕಡಲಿಗೆ: ಚಾಲಕ ಸಾವು, ಮತ್ತೊಬ್ಬ ಕಣ್ಮರೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಮಂಗಳೂರು:

ಚಾಲಕನ ನಿಯಂತ್ರಣ ತಪ್ಪಿದ ಕಂಟೈನರ್ ಲಾರಿ ಸಮುದ್ರಕ್ಕಿಳಿದ ಘಟನೆ ಇಲ್ಲಿನ ನವಮಂಗಳೂರು ಬಂದರಿನಲ್ಲಿ ನಡೆದಿದ್ದು, ಚಾಲಕ ಸಾವನ್ನಪ್ಪಿದ್ದು ಇನ್ನೋರ್ವ ಕಣ್ಮರೆಯಾಗಿದ್ದಾರೆ.
ಭಾನುವಾರ ತಡರಾತ್ರಿ ಈ ಘಟನೆ ನಡೆದಿದೆ. ಡೆಲ್ಟಾ ಕಂಪೆನಿಗೆ ಸೇರಿದ ಭಾರತ್ ಬೆಂಝ್ 10 ಚಕ್ರದ ಕಂಟೈನರ್ ಲಾರಿ ನವ ಮಂಗಳೂರು ಬಂದರಿನ 14 ನೇ ಬರ್ತ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸಮುದ್ರಕ್ಕೆ ಇಳಿದಿದೆ.
ಘಟನೆಯಲ್ಲಿ ಚಾಲಕ ರಾಜೇಸಾಬ (22), ಮೃತಪಟ್ಟಿದ್ದು, ಲಾರಿಯಲ್ಲಿದ್ದ ಇನ್ನೋರ್ವ ಸಹಚಾಲಕ ಭೀಮಪ್ಪ (25) ಕಣ್ಮರೆಯಾಗಿದ್ದಾರೆ. ಅವರಿಗಾಗಿ ಹುಡುಕಾಟ ಮುಂದುವರಿದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss