ಸತತ ಗದ್ದಲ, ಗಲಾಟೆ: ಆರು ದಿನ ಮೊದಲೇ ಅಂತ್ಯಗೊಂಡ ಸಂಸತ್ ಚಳಿಗಾಲದ ಅಧಿವೇಶನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಸತತ ಗದ್ದಲ, ಗಲಾಟೆಯಿಂದ ಶುಕ್ರವಾರ ಸಂಸತ್‌ ಚಳಿಗಾಲದ ಅಧಿವೇಶನವನ್ನು ನಿಗದಿತ ದಿನಾಂಕಕ್ಕಿಂತ ಆರು ದಿನ ಮೊದಲೇ ಅಂತ್ಯಗೊಳಿಸಲಾಗಿದೆ.
ಡಿಸೆಂಬರ್‌ 7ರಂದು ಆರಂಭವಾದ ಸಂಸತ್‌ ಅಧಿವೇಶನವು ಡಿಸೆಂಬರ್‌ 29ರಂದು ಮುಗಿಯಬೇಕಿತ್ತು. ಆದರೆ, ಆರು ದಿನಗಳ ಮೊದಲೇ ಅಂತ್ಯಗೊಳಿಸಲಾಗಿದೆ.
ಲೋಕಸಭೆಯಲ್ಲಿ ನಡೆದ ಕಲಾಪಗಳು ಶೇ.97ರಷ್ಟು ಫಲಪ್ರದ ಎಂದು ಸ್ಪೀಕರ್‌ ಓಂ ಬಿರ್ಲಾ ಮಾಹಿತಿ ನೀಡಿದರು. ಹಾಗೆಯೇ, ರಾಜ್ಯಸಭೆಯ ಕಲಾಪಗಳು ಶೇ.102ರಷ್ಟು ಫಲಪ್ರದ ಎಂದು ಸಭಾಪತಿ ಜಗದೀಪ್‌ ಧನಕರ್‌ ತಿಳಿಸಿದರು.
ಕೇಂದ್ರ ಸರ್ಕಾರವು ಸಂಸತ್‌ ಅಧಿವೇಶನದಲ್ಲಿ ಸುಮಾರು 25 ವಿಧೇಯಕಗಳನ್ನು ಮಂಡಿಸುವ ಯೋಜನೆ ರೂಪಿಸಿತ್ತು. ಆದರೆ, ಗದ್ದಲ, ಗಲಾಟೆಯಿಂದಾಗಿ ಅಧಿವೇಶನದಲ್ಲಿ ಕೇವಲ 9 ವಿಧೇಯಕಗಳಿಗೆ ಅಂಗೀಕಾರ ದೊರೆತಿದೆ. ಹಾಗಾಗಿ, 16 ವಿಧೇಯಕಗಳು ಬಾಕಿ ಉಳಿಯುವಂತಾಗಿದೆ. ‘ಸಂಸತ್ತಿನ ಉಭಯ ಸದನಗಳಲ್ಲಿ ಒಂಬತ್ತು ವಿಧೇಯಕಗಳು ಪಾಸಾಗಿವೆ’ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ಮಾಹಿತಿ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!