ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 7, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕಾಸರಗೋಡು ಜಿಲ್ಲೆಯಲ್ಲಿ ಮತ್ತೆ ಮುಂದುವರಿದ ಕೊರೋನಾ ಅಬ್ಬರ: ಇಂದು 251 ಮಂದಿಗೆ ಪಾಸಿಟಿವ್

ಹೊಸದಿಗಂತ ವರದಿ, ಕಾಸರಗೋಡು:

ಜಿಲ್ಲೆಯಲ್ಲಿ ಭಾನುವಾರ 251 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಈ ಪೈಕಿ 228 ಜನರಿಗೆ ಸಂಪರ್ಕದಿಂದ ಸೋಂಕು ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 81 ಮಂದಿ ಗುಣಮುಖರಾದರು. ಇದೇ ವೇಳೆ ಕೇರಳದಲ್ಲಿ 6986 ಜನರಿಗೆ ಕೊರೋನಾ ವೈರಸ್ ದೃಢಗೊಂಡಿದೆ. ಇದರಲ್ಲಿ 6258 ಮಂದಿಗೆ ಸಂಪರ್ಕದ ಮೂಲಕ ಸೋಂಕು ತಗಲಿದೆ. ರಾಜ್ಯದಲ್ಲಿ 2358 ಜನರು ಗುಣಮುಖರಾದರು.
ಕಲ್ಲಿಕೋಟೆ ಜಿಲ್ಲೆಯಲ್ಲಿ 1271, ಎರ್ನಾಕುಳಂ 842, ಮಲಪ್ಪುರಂ 728, ಕೋಟ್ಟಾಯಂ 666, ಕಣ್ಣೂರು 575, ತಿರುವನಂತಪುರ 525, ತೃಶೂರು 423, ಆಲಪ್ಪುಳ 339, ಪಾಲಕ್ಕಾಡು 325, ಕೊಲ್ಲಂ 304, ಇಡುಕ್ಕಿ 291, ಕಾಸರಗೋಡು 251, ಪತ್ತನಂತ್ತಿಟ್ಟ 246, ವಯನಾಡು ಜಿಲ್ಲೆಯಲ್ಲಿ 200 ಜನರಿಗೆ ಕೋವಿಡ್ ವೈರಸ್ ದೃಢಪಟ್ಟಿದೆ. ಈ ಮಧ್ಯೆ ಕೊರೋನಾ ಸೋಂಕು ಬಾಧಿಸಿ ಕೇರಳದಲ್ಲಿ ಭಾನುವಾರ 16 ಮಂದಿ ಮೃತಪಟ್ಟರು. ಈ ಮೂಲಕ ಕೋವಿಡ್ ವೈರಸ್ ತಗಲಿ ರಾಜ್ಯದಲ್ಲಿ ಇದುವರೆಗೆ 4783 ಜನರು ಸಾವಿಗೀಡಾದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss