ಪಾಕ್ ನಲ್ಲಿ ಮುಂದುವರಿದ ತಾಲಿಬಾನ್ ಅಟ್ಟಹಾಸ: ಈಗ ಪೊಲೀಸ್ ಠಾಣೆಗಳು ಸ್ವಾಧೀನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಾಕಿಸ್ತಾನದಲ್ಲಿ ತಾಲಿಬಾನ್ ಉಗ್ರರು ದಾಳಿ ನಡೆಸಿ ಪೊಲೀಸ್ ಠಾಣೆಯನ್ನು ವಶಪಡಿಸಿಕೊಂಡಿದ್ದಾರೆ. ವಾಯುವ್ಯ ಪಾಕಿಸ್ತಾನದ ಖೈಬರ್ ಶಖ್ತುನ್ ಖ್ವಾ ಪ್ರಾಂತ್ಯದ ಬನ್ನು ಕಂಟೋನ್ಮೆಂಟ್‌ನಲ್ಲಿ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಉಗ್ರರು ದಾಳಿ ನಡೆಸಿ ಪೊಲೀಸ್ ಠಾಣೆ ವಶಪಡಿಸಿಕೊಂಡಿದ್ದಾರೆ.‌ ಉಗ್ರರು ಕಂಟೋನ್ಮೆಂಟ್‌ಗೆ ನುಸುಳಿ ಜೈಲಿನಲ್ಲಿದ್ದ ಪಾಕ್‌ ಸರ್ಕಾರಕ್ಕೆ ಬೇಕಾಗಿದ್ದ ದಿ ಮೋಸ್ಟ್‌ ವಾಂಟೆಡ್ ಭಯೋತ್ಪಾದಕರನ್ನು ಬಿಡಿಸಿಕೊಂಡು ಹೋಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಉಗ್ರರು ಹೊರಗಿನಿಂದ ದಾಳಿ ಮಾಡಿದ್ದಾರೆಯೇ? ಒಳಗಿದ್ದ ಕೈದಿಗಳು ಪೊಲೀಸರಿಂದ ಆಯುಧಗಳನ್ನು ಪಡೆದು ದಾಳಿ ನಡೆಸಿದ್ದಾರೋ ಸ್ಪಷ್ಟವಾಗಿಲ್ಲ. ಸದ್ಯ ಈ ಪ್ರದೇಶವನ್ನು ಪಾಕಿಸ್ತಾನ ಸೇನೆ ತನ್ನ ಹಿಡಿತಕ್ಕೆ ತೆಗೆದುಕೊಂಡಿರುವುದಾಗಿ ತಿಳಿದುಬಂದಿದೆ.

ಮೊಹರು ಹಾಕಲಾಗಿದ್ದ ಪ್ರದೇಶಕ್ಕೆ ಪಾಕಿಸ್ತಾನ ಸೇನಾ ಪಡೆಗಳನ್ನು ತಕ್ಷಣವೇ ರವಾನಿಸಲಾಗಿದ್ದು,  ಸ್ಥಳೀಯ ನಿವಾಸಿಗಳು ಮನೆಯೊಳಗೆ ಇರುವಂತೆ ಮನವಿ ಮಾಡಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!