ಚಿನ್ನ ಬೆಳ್ಳಿಯ ದರದಲ್ಲಿ ಸತತ ಇಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು:
ಕಳೆದ ವಾರದ ತನಕವೂ ಚಿನ್ನ ಬೆಳ್ಳಿ ದರದಲ್ಲಿ ಕಾಣುತ್ತಿದ್ದ ಏರಿಕೆ 3-4 ದಿನಗಳಲ್ಲಿ ಇಳಿಮುಖದ ಹಾದಿ ಹಿಡಿದಿದೆ. ಇದರಿಂದ ಹಬ್ಬಗಳು ಹಾಗೂ ಮದುವೆಯಂಥ ಸಮಾರಂಭಗಳಿಗೆ ಚಿನ್ನ ಖರೀದಿಸುವವರಿಗೆ ಅನುಕೂಲವಾಗುತ್ತಿದೆ.

ಎಷ್ಟಿದೆ ಚಿನ್ನದ ದರ?
ಭಾರತದಲ್ಲಿ 22 ಕ್ಯಾರೆಟ್ ಚಿನ್ನದ (10 ಗ್ರಾಂ) ಬೆಲೆ ನಿನ್ನೆ 47,950 ರೂ. ಇದ್ದುದು ಇಂದು 47,750 ರೂ. ಆಗಿದೆ. ಅದೇ ರೀತಿ 24 ಕ್ಯಾರೆಟ್ ಚಿನ್ನದ ದರ 52,310 ರೂ. ಇದ್ದುದು 52,100 ರೂ. ಆಗಿದೆ. ನಿನ್ನೆ 280 ರೂ. ಕುಸಿತ ಕಂಡಿದ್ದ ಬಂಗಾರದ ಬೆಲೆ ಇಂದು ಮತ್ತು 210 ರೂ. ಇಳಿಕೆಯಾಗಿದೆ.
ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ನಿರ್ಣಾಯಕವಾಗುತ್ತದೆ. ಚಿನ್ನದ ಉತ್ಪಾದನೆಯಲ್ಲಿ ಪ್ರಮುಖ ರಾಷ್ಟ್ರವಾಗಿರುವ ರಷ್ಯಾ ಮೇಲಿನ ನಿರ್ಬಂಧಗಳಿಂದಾಗಿ ಆಮದು ಕಡಿಮೆಯಾಗುವ ಭೀತಿಯೂ ಚಿನ್ನದ ಬೆಲೆಯ ಹೆಚ್ಚಳಕ್ಕೆ ಕಾರಣವಾಗಿದೆ. ಭಾರತದಲ್ಲಿ ಚಿನ್ನದ ಬೆಲೆ ಹೆಚ್ಚಳಕ್ಕೆ ರಷ್ಯಾ- ಉಕ್ರೇನ್ ಯುದ್ಧ ಕೂಡ ಕಾರಣ ಎನ್ನಲಾಗಿದೆ. ಭಾರತದಲ್ಲಿ ಬೆಳ್ಳಿಯ ಬೆಲೆ ಕೂಡ ಇಂದು 1 ಕೆಜಿಗೆ ಬರೋಬ್ಬರಿ 400 ರೂ. ಇಳಿಕೆ ಕಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!