Wednesday, August 10, 2022

Latest Posts

ಐಪಿಎಲ್ ಕುರಿತು ವಿವಾದಾತ್ಮಕ ಹೇಳಿಕೆ: ಕ್ಷಮೆಯಾಚಿಸಿದ ಡೇಲ್​ ಸ್ಟೇನ್!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಐಪಿಎಲ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದ ದಕ್ಷಿಣ ಆಫ್ರಿಕಾದ ವೇಗಿ ಡೇಲ್​ ಸ್ಟೇನ್​ ಇದೀಗ ಕ್ಷಮೆ ಕೋರಿದ್ದು, ನನ್ನ ಹೇಳಿಕೆಯಲ್ಲಿ ವಿಶ್ವದ ಅತಿದೊಡ್ಡ ಪ್ರಾಂಚೈಸಿಯನ್ನು ಅವಮಾನಿಸುವ ಅಥವಾ ಕೀಳಾಗಿ ಬಿಂಬಿಸುವ ಉದ್ದೇಶವಿರಲಿಲ್ಲ ಎಂದು ಹೇಳಿದ್ದಾರೆ.
ಡೇಲ್ ಸ್ಟೇನ್, ಇಂಡಿಯನ್ ಪ್ರೀಮಿಯರ್​ ಲೀಗ್​ನಲ್ಲಿ ಉತ್ತಮ ಗುಣಮಟ್ಟದ ಕ್ರಿಕೆಟ್​ ಮರೆಯಾಗುತ್ತಿದೆ. ಅಲ್ಲಿ ಕ್ರಿಕೆಟ್​ಗಿಂತ ದುಡ್ಡಿನ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತದೆ ಎಂದು ಹೇಳಿದ್ದರು. ಅಲ್ಲದೆ ಪಾಕಿಸ್ತಾನ ಸೂಪರ್​ ಲೀಗ್​ ಮತ್ತು ಲಂಕಾ ಪ್ರೀಮಿಯರ್ ಲೀಗ್​ನಲ್ಲಿ ಕ್ರಿಕೆಟ್​ಗೆ ಮಹತ್ವವಿದೆ ಎಂದು ಹೇಳುವ ಮೂಲಕ ದೊಡ್ಡ ವಿವಾದ ಸೃಷ್ಟಿಸಿದ್ದರು. ಇದರಿಂದ ಕೆರಳಿದ್ದ ಭಾರತೀಯ ಅಭಿಮಾನಿಗಳು ಸ್ಟೇನ್ ವಿರುದ್ಧ ಕಿಡಿಕಾರಿದ್ದರು.
ಇದರಿಂದ ಎಚ್ಚೆತ್ತ ಸ್ಟೇನ್ , ಐಪಿಎಲ್ ನನ್ನ ವೃತ್ತಿಜೀವನದಲ್ಲಿ ಅದ್ಭುತವಾದದ್ದೇನೂ ಅಲ್ಲ, ಇತರೆ ಆಟಗಾರರಿಗೂ ಕೂಡ. ಆದರೆ ನನ್ನ ಮಾತುಗಳು ಯಾವುದೇ ಲೀಗ್‌ಗಳನ್ನು ಅವಮಾನಿಸುವ, ಕೀಳಾಗಿ ಬಿಂಬಿಸುವ ಅಥವಾ ಹೋಲಿಸುವ ಉದ್ದೇಶವನ್ನು ಹೊಂದಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ನನ್ನ ಮಾತುಗಳನ್ನು ಸಂದರ್ಭದ ಹೊರಗೆ ಬಿಂಬಿಸಲಾಗಿದೆ. ಇದರಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.
ಐಪಿಎಲ್​ನಲ್ಲಿ 95 ಪಂದ್ಯಗಳನ್ನಾಡಿರುವ ಡೇಲ್ ಸ್ಟೇನ್​ 97 ವಿಕೆಟ್​ ಪಡೆದಿದ್ದಾರೆ. 8 ರನ್​ಗಳಿಗೆ 3 ವಿಕೆಟ್ ಪಡೆದಿರುವುದು ಅವರ ಉತ್ತಮ ಬೌಲಿಂಗ್ ಪ್ರದರ್ಶನವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss