Thursday, August 11, 2022

Latest Posts

ಮತಾಂತರ ನಿಷೇಧ ಮಸೂದೆ ಜಾರಿಗೆ ಒತ್ತಾಯಿಸಿ ಹಿಂದೂ ಜಾಗರಣ ವೇದಿಕೆಯಿಂದ ಪ್ರತಿಭಟನೆ

ಹೊಸ ದಿಗಂತ ವರದಿ, ಮಂಡ್ಯ :

ಕರ್ನಾಟಕದಲ್ಲಿ ಮತಾಂತರ ನಿಷೇಧ ಮಸೂದೆಯನ್ನು ತಕ್ಷಣ ಜಾರಿಗೊಳಿಸಬೇಕು. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದು, ಸಿಖ್ಖರ ಮೇಲೆ ನಡೆಯುತ್ತಿರುವ ಅನಾಗರಿಕ ದೌರ್ಜನ್ಯವನ್ನು ತಡೆದು ನೊಂದವರಿಗೆ ರಕ್ಷಣೆ ನೀಡಬೇಕು ಮತ್ತು ಲವ್‌ಜಿಹಾದ್ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಹಿಂದೂ ಜಾಗರಣ ವೇದಿಕೆ ಕಾರ‌್ಯಕರ್ತರು ಪ್ರತಿಭಟನೆ ನಡೆಸಿದರು.
ಮತಾಂತರ ವಿಷಯಕ್ಕೆ ಸಂಬಂಧಿಸಿದಂತೆ ಕೇವಲ ಧರ್ಮಬೋದನೆಗಾಗಿ ಪ್ರಚಾರ ಮಾಡುವುದರ ಹೊರತು ಇನ್ನಿತರ ಉದ್ದೇಶದೊಡನೆ ಸಂಬಂಧಿಸಿದಂತೆ ಪ್ರಚಾರವನ್ನು ನಿಷೇಧಿಸಬೇಕು. ವಿದೇಶಿ ವ್ಯಕ್ತಿ ಹಾಗೂ ಹಣದಿಂದ ಪ್ರಚಾರ ಮಾಡುವುದನ್ನು ನಿಯಂತ್ರಿಸಬೇಕು. ಅನ್ಯಧರ್ಮ ಬಿಟ್ಟು ತಮ್ಮ ಧರ್ಮಕ್ಕೆ ಬನ್ನಿ ಎಂದು ಹೇಳುವುದನ್ನು ನಿರ್ಬಂಧಿಸಬೇಕು. ದೇಶದ ಪ್ರತಿ ಪ್ರಜೆಯ ಧರ್ಮವನ್ನು ಗುರುತಿಸಲು ಅನುಕೂಲವಾಗುವಂತೆ ಅವರಿಗೆ ಧರ್ಮ ಪ್ರಮಾಣ ಪತ್ರ ನೀಡುವುದು ಎಂದು ಆಗ್ರಹಿಸಿದರು.
ಇನ್ನು ರಾಜ್ಯದಲ್ಲಿ ಲವ್ ಜಿಹಾದ್ ದೊಡ್ಡಜಾಲವೇ ಇದೆ. ಪ್ರೀತಿ ಪ್ರೇಮದ ಸೋಗಿನಲ್ಲಿ ಜಿಹಾದಿ ಅನ್ಯಸಮುದಾಯದ ಯುವಕರು ಹಿಂದು ಹೆಣ್ಣುಮಕ್ಕಳನ್ನು ತಮ್ಮ ಮೋಸದ ಬಲೆಗೆ ಸಿಲುಕಿಸುವ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬಳಿಕ ಅವರನ್ನು ಮತಾಂತರ ಮಾಡಿ ವೇಶ್ಯಾವಾಟಿಕೆ, ಉಗ್ರ ಚಟುವಟಿಕೆ, ಡ್ರಗ್ಸ್ ಸಾಗಾಣಿಕೆಯಂತಹ ಸಮಾಜಘಾತಕ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಲವ್ ಜಿಹಾದ್ ಅನ್ನು ಗಂಭೀರ ಪ್ರಕರಣವೆಂದು ಪರಿಗಣಿಸಿ ಕಾಯ್ದೆ ರೂಪಿಸಬೇಕು ಎಂದು ಒತ್ತಾಯಿಸಿದರು.
ಅಂತೆಯೇ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದು, ಸಿಖ್ಖರ ಮೇಲೆ ದಾಳಿ ನಡೆಯುತ್ತಿದೆ. ಆದ್ದರಿಂದ ಇವರಿಗೆ ಸೂಕ್ತ ಭದ್ರತೆ ಒದಗಿಸುವುದರ ಜತೆಗೆ ಪರಿಹಾರ ನೀಡುವಂತೆ ಅಲ್ಲಿನ ಸರ್ಕಾರಕ್ಕೆ ನಮ್ಮ ಕೇಂದ್ರ ಸರ್ಕಾರ ನಿರ್ದೇಶನ ನೀಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಚಿಕ್ಕಬಳ್ಳಿ ಬಾಲು, ಪುನೀತ್, ಚೇತನ್, ಸಂತೋಷ್, ಸುನೀಲ್ ಇತರರಿದ್ದರು.
ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಸಂದೇಶದಿಂದ ಹಿಂದು ಸಮುದಾಯದವರ ಮೇಲೆ ನಿರಂತರವಾಗಿ ದಾಳಿ ಮಾಡಲಾಗುತ್ತಿದೆ. ಈಗಾಗಲೇ ಮೂರು ಜನರು ಮೃತಪಟ್ಟಿದ್ದಾರೆ. ಅಂತೆಯೇ 22 ಜಿಲ್ಲೆಗಳಲ್ಲಿ ದಾಳಿ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss