Thursday, July 7, 2022

Latest Posts

ಮತಾಂತರ ನಿಷೇಧ ವಿಧೇಯಕ ವಿಚಾರದಲ್ಲಿ ಕಾಂಗ್ರೆಸ್‌ನವರಿಂದ ಇಬ್ಬಗೆಯ ನಾಟಕ: ಹೆಚ್.ವಿಶ್ವನಾಥ್

ಹೊಸ ದಿಗಂತ ವರದಿ, ಮೈಸೂರು:

ಬೆಳಗಾವಿ ಅಧಿವೇಶನದಲ್ಲಿ ವಿಧಾನಸಭೆಯ ಅಧಿವೇಶನದಲ್ಲಿ ಮಂಡನೆ ಮಾಡಿರುವ ಮತಾಂತರ ನಿಷೇಧ ವಿಧೇಯಕ ವಿಚಾರದಲ್ಲಿ ಕಾಂಗ್ರೆಸ್ ನವರು ಇಬ್ಬಗೆಯ ನಾಟಕವಾಡುತ್ತಿದ್ದಾರೆ ಎಂದು ಬಿಜೆಪಿಯ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.
ಗುರುವಾರ ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ನಾನು ಅಧಿವೇಶನದಿಂದ ಹೊರಗ್ಗೆ ಇದ್ದಾಗ ಮತಾಂತರ ನಿಷೇಧ ಕಾಯ್ದೆಯನ್ನು ಮಂಡಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಆದರೆ ಕಾಯ್ದೆ ಮಂಡನೆ ವೇಳೆ ಅಧಿವೇಶನಕ್ಕೆ ಬಾರದೆ ಹೊರಗೆ ಹರಟೆ ಹೊಡೆಯುತ್ತಾ ಕುಳಿತಿದ್ದರು. ಕಾಯ್ದೆ ಮಂಡನೆಯಾದ ನಂತರ ಅಧಿವೇಶನಕ್ಕೆ ಬಂದು ನಾಟಕವಾಡುತ್ತಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ನಿಮ್ಮ ವೋಟ್ ಬ್ಯಾಂಕ್ ದಲಿತರು. ಮುಸ್ಲಿಂರು, ಹಿಂದುಳಿದವರು. ಇವರ ಪರ ಹೋರಾಟ ಮಾಡುತ್ತಿದ್ದೀರಾ.? ದಲಿತರು ಮತಾಂತರ ಆಗಲೇ ಬಾರದು ಎಂದು ದಿಗ್ಬಂಧನ ಹಾಕುತ್ತಿದ್ದಾರೆ. ಇದು ಯಾವ ನ್ಯಾಯ..? ಎಂದು ಕಿಡಿಕಾರಿದರು.
12 ಶತಮಾನದಲ್ಲಿ ಸಮಾನತೆ ಬಗ್ಗೆ ಬಸವಣ್ಣ ಮಾನವ ಧರ್ಮ ಸ್ಥಾಪನೆ ಮಾಡಿದ್ರು. ಜಾತಿ ಧರ್ಮ ಭೇದವಿಲ್ಲದೆ ಸಮಾನತೆ ಬಗ್ಗೆ ಹೇಳಿದರು.. ಭಾರತ ಬಹುತ್ವವುಳ್ಳ ದೇಶ. ಅಂಬೇಡ್ಕರ್ ಸಂವಿಧಾನವನ್ನು ನೀಡಿದ್ದಾರೆ. ತಮ್ಮ ಇಷ್ಟ ಬಂದ ಧರ್ಮ, ದೇವರನ್ನು ಪೂಜೆ ಮಾಡಲು ಅವಕಾಶ ನೀಡಲಾಗಿದೆ. ಪ್ರಧಾನಿ ಮೋದಿ ಹಿಂದುತ್ವದ ಬಗ್ಗೆ ಎಲ್ಲಿಯೂ ಹೇಳಿಲ್ಲ. ದೇಶದ ಮಹನಿಯರು ಹೇಳಿರುವುದು ಸಹಬಾಳ್ವೆ ಬಗ್ಗೆಯೆ ಹೇಳಿರೋದು. ಬಸವೇಶ್ವರ ಕಟ್ಟಿದ ಮಾನವ ಧರ್ಮವನ್ನ ಮುಖ್ಯಮಂತ್ರಿ ಒಡೆಯುವ ಕೆಲಸವಾಗಿರೋದು ವಿಪರ್ಯಾಸ ಮುಖ್ಯಮಂತ್ರಿ ಹೆಸರು ಕೂಡ ಬಸವಣ್ಣನೇ. ಇದನ್ನು ಯಾರು ಮೆಚ್ಚುವುದಿಲ್ಲ ಎಂದರು.
ಈ ಕಾಯ್ದೆಯಿಂದ ರಾಜ್ಯ ಅಭಿವೃದ್ಧಿ ಆಗುತ್ತಾ. ಕಾಯ್ದೆ ಜಾರಿಗೆ ಇಷ್ಟೊಂದು ಅವಸರ ಯಾಕೆ.? ಕಾಂಗ್ರೆಸ್ ನವರು ನಾಟಕ ಬಿಟ್ಟು ಸರಿಯಾದ ರೀತಿಯಲ್ಲಿ ವಿರೋಧ ಮಾಡಿ. ಆಡಳಿತ ಪಕ್ಷದವರು ಕಾಯ್ದೆಯನ್ನ ಏಕಾಏಕಿ ಜಾರಿಗೆ ತರೋದು ಬೇಡಾ, ಚರ್ಚೆ ಮಾಡಿ ತನ್ನಿ ಎಂದು ಸಲಹೆ ನೀಡಿದರು.
ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ದಾಂಧಲೆಯಾದರೂ ಬೆಳಗಾವಿ ಜಿಲ್ಲೆಯ ಯಾವ ರಾಜಕೀಯ ನಾಯಕರು ಯಾರು ಮಾತನಾಡುತ್ತಿಲ್ಲ. ಇವರಿಗೆ ಕನ್ನಡಿಗರು ಓಟ ಹಾಕಿಲ್ಲವಾ.? ಮರಾಠಿ ಮತದಾರರೆ ಹೆಚ್ಚಾದರಾ.? ರಾಜ್ಯದಲ್ಲಿ ಎಂಇಎಸ್ ಅನ್ನು ಬ್ಯಾನ್ ಮಾಡಬೇಕು. ಕನ್ನಡ ನೀರು ಅನ್ನ ತಿಂದು ಕನ್ನಡ ಬಾವುಟ ಸುಟ್ಟಿದ್ದಾರೆ ಎಂದು ಕಿಡಿಕಾರಿದರು.
ನಾನು ಕನ್ನಡ ಸಂಸ್ಕೃತಿ ಸಚಿವನಾಗಿದ್ದಾಗ ರಂಗಾಯಣಕ್ಕೆ ರೂಪ ಕೊಟ್ಟಿದ್ದೆ. ರಂಗಾಯಣ ರಿಜಿಸ್ಟ್ರೇಶನ್ ಆಗಿಲ್ಲ ಎಂದು ಕಾರಂತರು ಹೇಳಿದಾಗ ಮೋಯ್ಲಿ ಅವರೊಂದಿಗೆ ಮಾತನಾಡಿ ಕೆಲಸ ಮಾಡಿಸಿದೆವು. ಇಲ್ಲಿಯವರೆಗೆ 10 ಜನ ನಿರ್ದೇಶಕರು ಆಗಿದ್ದಾರೆ. ಯಾರು ಸಹ ತತ್ವ ಸಿದ್ದಂತವನ್ನ ಹೇರಿರಲಿಲ್ಲ. ಅಡ್ಡಂಡ ಕಾರ್ಯಪ್ಪ ನಿರ್ದೇಶಕರು ಆಗಿದ್ದೀರಿ. ಪದ ಪ್ರಯೋಗ ಮಾಡುವಾಗ ಸಾಮರಸ್ಯದಿಂದ ಮಾಡಬೇಕು. ಈ ಹಿಂದಿನ ನಿರ್ದೇಶಕರು ರಂಗಾಯಣವನ್ನು ಕಾಪಾಡಿಕೊಂಡು ಬಂದಿದ್ದಾರೆ. ಗುಂಡೂರಾವ್ ಅವರ ಕಾಲದಲ್ಲಿ ನಿರ್ಮಾಣವಾಗಿದ್ದ ಕಲಾಭವನಕ್ಕೆ ಬೀಗ ಹಾಕಿಬಿಟ್ಟಿದ್ದಾರೆ. ಇದು ಸರಿಯಲ್ಲ. ಅಡ್ಡಂಡ ಕಾರ್ಯಪ್ಪ ಸಾಮರಸ್ಯದಿಂದ ನಡೆದುಕೊಳ್ಳಲಿ ಎಂದು ಸಲಹೆ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss