Thursday, August 18, 2022

Latest Posts

ಕ್ರೈಸ್ತ ಮಿಷನರಿಗಳಿಂದ ಮತಾಂತರ ಮಾಡುತ್ತಿವೆ ಎಂಬ ಹೇಳಿಕೆಗೆ ಸತ್ಯಾಂಶವಿಲ್ಲ

ಹೊಸ ದಿಗಂತ ವರದಿ, ಶಿವಮೊಗ್ಗ :

ಕ್ರೈಸ್ತ ಮಿಷನರಿಗಳು ರಾಜ್ಯದಲ್ಲಿ ವ್ಯಾಪಕವಾಗಿ ಮತಾಂತರ ಮಾಡುತ್ತಿವೆ ಎಂದು ಶಾಸಕ ಗೂಳಿಹಟ್ಟಿ ಶೇಖರ್ ವಿಧಾನ ಸಭೆಯಲ್ಲಿ ಹೇಳಿರುವುದು ಖಂಡನೀಯ ಎಂದು ಕ್ರಿಶ್ಚಿಯ್ ಫೋರಂ ಫಾ್ ಹ್ಯೂಮ್ ರೈಟ್ಸ್ ರಾಜ್ಯಾಧ್ಯಕ್ಷ ಡಿ.ರಾಜಶೇಖ್ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ಕ್ರೈಸ್ತ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಹೇಳಿಕೆ ನೀಡಿರುವುದು ಸರಿಯಲ್ಲ. ಮತಾಂತರವನ್ನು ತಡೆಯಲು ಹೋದವರ ಮೇಲೆ ಜಾತಿ ನಿಂದನೆ ಮತ್ತು ಅತ್ಯಾಚಾರದ ಪ್ರಕರಣಗಳನ್ನು ಹಾಕುತ್ತಾರೆಂಬುದರಲ್ಲಿ ಸತ್ಯಾಂಶವಿಲ್ಲ ಎಂದರು.
ಇಂತಹ ಯಾವುದೇ ಪ್ರಕರಣಗಳು ಕೂಡ ರಾಜ್ಯದಲ್ಲಿ ದಾಖಲಾಗಿಲ್ಲ. ಆದರೂ ಕೂಡ ವಿಧಾನ ಸಭೆಯಲ್ಲಿ ಹೇಳಿಕೆ ನೀಡುವ ಮೂಲಕ ಕ್ರೈಸ್ತ ಸಮುದಾಯವನ್ನು ಅನುಮಾನಿಸುವಂತಾಗಿದೆ. ಈ ಬಗ್ಗೆ ಸಭಾಪತಿ, ಗೃಹ ಸಚಿವರು ಮತ್ತಿತರ ಸದಸ್ಯರು ಮಾತನಾಡಿ ರಾಜ್ಯದಲ್ಲಿ ಮತಾಂತರಿ ವಿರೋಧಿಕಾನೂನನ್ನು ಜಾರಿಗೆ ತರುವ ಇಂಗಿತ ವ್ಯಕ್ತಪಡಿಸಿದ್ದು, ಇದರ ಬಗ್ಗೆ ಚರ್ಚಿಸಬೇಕಿದೆ ಎಂದರು.
ಕೆಲವರು ಚರ್ಚ್‌ಗಳ ಮೇಲೆ ದಾಳಿ ಮಾಡುತ್ತಾ ಧರ್ಮ ಗುರುಗಳನ್ನು ಎಲ್ಲರ ಮುಂದೆ ನಿಂದಿಸುವುದು, ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತೆ ಮಾಡಲಾಗುತ್ತಿದೆ. ಆಸೆ ಆಮಿಷವೊಡ್ಡಿ ಒತ್ತಾಯದ ಮತಾಂತರ ಮಾಡಿರುವ ಯಾವುದೇ ಪ್ರಕರಣಗಳು ಇದುವರೆಗೂ ದಾಖಲಾಗಿಲ್ಲ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!