ಬೆಳಗ್ಗೆ ಯಾವ ತಿಂಡಿ ಮಾಡೋದು ಅಂತ ಯೋಚ್ನೆನಾ? ಹಾಗಾದ್ರೆ ಈ ಸಿಂಪಲ್ ರೈಸ್ ಬಾತ್ ರೆಸಿಪಿ ಟ್ರೈ ಮಾಡಿ. ಇದೊಂದು ತರಹ ಒನ್ ಪಾಟ್ ರೆಸಿಪಿ.
ಬೇಕಾಗುವ ಸಾಮಗ್ರಿಗಳು:
ಅಕ್ಕಿ – 1 ಕಪ್
ಬೆಳ್ಳುಳ್ಳಿ – 4-5 ಎಸಳು
ಹಸಿಮೆಣಸು – 2-3
ಟೊಮೋಟೋ – 1 (ಕತ್ತರಿಸಿದ್ದು)
ಈರುಳ್ಳಿ – 1 (ಕತ್ತರಿಸಿದ್ದು)
ಕ್ಯಾರೆಟ್ – 1 (ಕತ್ತರಿಸಿದ್ದು)
ಬಟಾಣಿ – ¼ ಕಪ್
ಕೊತ್ತಂಬರಿ ಸೊಪ್ಪು – ಸ್ವಲ್ಪ
ಕರಿಬೇವು – 5-6 ಎಲೆ
ಎಣ್ಣೆ ಅಥವಾ ತುಪ್ಪ – 2 ಟೀಸ್ಪೂನ್
ಸಾಸಿವೆ – ½ ಟೀಸ್ಪೂನ್
ಜೀರಿಗೆ – ½ ಟೀಸ್ಪೂನ್
ಹುಳಿ – ½ ಟೀಸ್ಪೂನ್
ಹಿಂಗು – ಚಿಕ್ಕಷ್ಟು
ಉಪ್ಪು – ರುಚಿಗೆ ತಕ್ಕಷ್ಟು
ಬಿಸಿ ನೀರು – 2 ಕಪ್
ತಯಾರಿಸುವ ವಿಧಾನ:
ಮೊದಲು ಅಕ್ಕಿಯನ್ನು ತೊಳೆದು 15 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ.
ಕುಕ್ಕರ್ ನಲ್ಲಿ ಎಣ್ಣೆ ಅಥವಾ ತುಪ್ಪ ಹಾಕಿ ಬಿಸಿ ಮಾಡಿದ ನಂತರ ಸಾಸಿವೆ, ಜೀರಿಗೆ, ಕರಿಬೇವು, ಬೆಳ್ಳುಳ್ಳಿ ಮತ್ತು ಹಸಿಮೆಣಸು ಹಾಕಿ ಹುರಿಯಿರಿ. ನಂತರ ಟೊಮೋಟೋ, ಕ್ಯಾರೆಟ್, ಬಟಾಣಿ ಮತ್ತು ಬೇರೆ ತರಕಾರಿಗಳನ್ನು ಸೇರಿಸಿ 2-3 ನಿಮಿಷ ಹುರಿಯಿರಿ.
ಈಗ ಇದಕ್ಕೆ ಉಪ್ಪು, ಹುಳಿ, ಹಿಂಗು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ, ನೆನೆಸಿದ ಅಕ್ಕಿ ಹಾಕಿ 2 ನಿಮಿಷ ಹುರಿದು, 2 ಕಪ್ ಬಿಸಿ ನೀರು ಹಾಕಿ, ಕುಕ್ಕರ್ ಮುಚ್ಚಿ 2 ವಿಷಲ್ ಕೂಗಿಸಿದರೆ ಸಿಂಪಲ್ ರೈಸ್ ಬಾತ್ ರೆಡಿ.