ವೃದ್ಧನಿಗೆ ಕಾಲಿನಿಂದ ಒದ್ದು, ತಲೆಕೆಳಗೆ ನೇತುಹಾಕಿದ ಕಾನ್ಸ್‌ಟೇಬಲ್‌: ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಧ್ಯಪ್ರದೇಶದಲ್ಲಿ ಪೊಲೀಸ್ ಪೇದೆಯೊಬ್ಬ ವೃದ್ಧನ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಇದೀಗ ವೈರಲ್ ಆಗಿದೆ. ರುವಾ ಜಿಲ್ಲೆಯ ಜಬಲ್‌ಪುರದಲ್ಲಿ ಬುಧವಾರ ಈ ಘಟನೆ ನಡೆದಿದೆ. ರೈಲ್ವೆ ನಿಲ್ದಾಣದಲ್ಲಿ ವೃದ್ಧರೊಬ್ಬರು ಪೊಲೀಸ್ ಪೇದೆ ಹಾಗೂ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆಂದು ಕೋಪಗೊಂಡ ಕಾನ್ಸ್‌ಟೇಬಲ್ ಅನಂತ್ ಮಿಶ್ರಾ ವೃದ್ಧನನ್ನು ಮನಸೋ ಇಚ್ಛೆ ಥಳಿಸಿ ಬೂಟು ಕಾಲಿನಿಂದ ಒದ್ದಿದ್ದಾನೆ.

ಬಳಿಕ ಅಲ್ಲಿಂದ ಎಳೆದೊಯ್ದು ರೈಲ್ವೆ ಹಳಿ ಮೇಲೆ ತಲೆಕೆಳಗಾಗಿ ನೇತು ಹಾಕಿ, ಮತ್ತೊಮ್ಮೆ ಒದ್ದಿದ್ದಾನೆ. ಸ್ಟೇಷನ್‌ನಲ್ಲಿ ಅಷ್ಟೊಂದು ಜನ ಇದ್ದರೂ ಯಾರೂ ಕಾನ್ಸ್‌ಟೇಬಲ್‌ನನ್ನು ತಡೆಯುವ ಪ್ರಯತ್ನ ಮಾಡಿಲ್ಲ. ರೈಲಿನಲ್ಲಿದ್ದ ಪ್ರಯಾಣಿಕರೊಬ್ಬರು ಘಟನೆಯನ್ನು ವಿಡಿಯೋ ಮಾಡಿ ಶೇರ್ ಮಾಡಿದ್ದಾರೆ. ಘಟನೆಗೆ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಬಂದು ಪೊಲೀಸ್ ಪೇದೆಯನ್ನು ಅಮಾನತು ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!