spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೊರೋನಾ 3ನೇ ಅಲೆ ಆತಂಕ: ಕೇರಳ- ಮಹಾರಾಷ್ಟ್ರ ಗಡಿಯಲ್ಲಿ ಹದ್ದಿನ ಕಣ್ಣು!

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ರಾಜ್ಯದ 8 ಜಿಲ್ಲೆಗಳಲ್ಲಿ ಕೊರೋನಾ ಸ್ಥಿತಿಗತಿ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ನಡೆಸಿದ್ದು, ಬಳಿಕ ಸುದ್ದಿಗೋಷ್ಠಿ ನಡೆಸಿ 2ನೇ ಅಲೆಯಲ್ಲೂ ಕೇರಳದಿಂದಲೇ ಸೋಂಕು ಹೆಚ್ಚಾಗಿತ್ತು. ಹೀಗಾಗಿ ಕೇರಳ ಗಡಿಯಲ್ಲಿ ಕಟ್ಟೆಚ್ಚರಕ್ಕೆ ಸೂಚನೆ ನೀಡಲಾಗಿದೆ. 8 ಜಿಲ್ಲೆಗಳಲ್ಲಿ ವೈದ್ಯಕೀಯ ಸೌಲಭ್ಯ ಹೆಚ್ಚಿಸಲು ಸೂಚಿಸಿದ್ದೇನೆ. ವ್ಯಾಕ್ಸಿನ್‌ ನೀಡುವುದನ್ನೂ ಹೆಚ್ಚಿಸುವಂತೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕೇರಳ ಗಡಿಯಲ್ಲಿ ಹಾಗೂ ಮಹಾರಾಷ್ಟ್ರ ಗಡಿಯಲ್ಲಿ ನಾಳೆಯಿಂದಲೇ 2 ಡೋಸ್ ತೆಗೆದುಕೊಂಡಿದ್ದರೆ ಮಾತ್ರ ಕರ್ನಾಟಕಕ್ಕೆ ಪ್ರವೇಶಕ್ಕೆ ಅವಕಾಶ. ನಾಳೆಯಿಂದಲೇ ಈ ನಿಯಮ ಅನ್ವಯ ಆಗಲಿದೆ. 72 ಗಂಟೆಯ ಆರ್‌ಟಿಪಿಸಿಆರ್‌ ನೆಗೆಟಿವ್ ರಿಪೋರ್ಟ್‌ ಕಡ್ಡಾಯ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಕೊರೋನಾ ನಿರ್ವಹಣೆ ಕಟ್ಟುನಿಟ್ಟಾಗಿ ಮಾಡಲು ಕೊವಿಡ್ ಹೆಚ್ಚಿರುವ ಜಿಲ್ಲಾಡಳಿತಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ಡಿಸಿಗಳೇ ಖುದ್ದು ಮುಂದೆ ನಿಂತು ಕೊವಿಡ್ ನಿರ್ವಹಿಸಬೇಕು ಎಂದು ಬೊಮ್ಮಾಯಿ ಖಡಕ್ ಸೂಚನೆ ಕೊಟ್ಟಿದ್ದಾರೆ. ಕೇರಳ, ಮಹಾರಾಷ್ಟ್ರದ ಪ್ರಯಾಣಿಕರ ಬಳಿ RTPCR ನೆಗೆಟಿವ್​ ರಿಪೋರ್ಟ್​ ಕಡ್ಡಾಯವಾಗಿ ಇರಬೇಕು ಎಂದು ತಿಳಿಸಲಾಗಿದೆ.

ಅಲ್ಲದೆ ದ.ಕನ್ನಡ ಜಿಲ್ಲೆಯಲ್ಲಿ ಏಳು ದಿನಗಳ ಅಂತರದಲ್ಲಿ ಆರ್​ಟಿಸಿಪಿಆರ್ ಟೆಸ್ಟ್ ಮಾಡಿಸಬೇಕು. ರಾಜ್ಯದಲ್ಲಿ ಮೈಕ್ರೋ ಕಂಟೈಂನ್ಮೆಂಟ್ ಜೋನ್ ಹೆಚ್ಚಿಸಲು ಹಾಗೂ ರಾಂಡಂ ಟೆಸ್ಟಿಂಗ್, ಟ್ರೇಸಿಂಗ್ ಮಾಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ರಾತ್ರಿ ಕರ್ಫ್ಯೂ ಇನ್ನೂ 15 ದಿವಸ ಮುಂದುವರಿಸುತ್ತೇವೆ. ಚಿತ್ರಮಂದಿರಗಳಲ್ಲೂ ಶೇಕಡಾ 50 ಜನರಿಗೆ ಮಾತ್ರ ಅವಕಾಶ ಇರಲಿದೆ. ಇನ್ನೂ 15 ದಿವಸ ಶೇಕಡಾ 50 ಜನರಿಗೆ ಮಾತ್ರ ಅವಕಾಶ ಇರಲಿದೆ. ಪಬ್‌ಗಳಿಗೂ ಈಗಿರುವ ನಿಯಮವೇ ಅನ್ವಯವಾಗುತ್ತೆ. ಗಡಿಗಳಲ್ಲಿ ಚೆಕ್‌ಪೋಸ್ಟ್‌ ಸ್ಥಾಪಿಸುವಂತೆ ಸೂಚಿನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಕೇಂದ್ರದ ಆರೋಗ್ಯ ಸಚಿವರನ್ನು ಲಸಿಕೆ ಹೆಚ್ಚಿಸುವಂತೆ ಕೇಳಿದ್ದೇನೆ. 60 ಲಕ್ಷ ಡೋಸ್ ಲಸಿಕೆ ಕೊಡ್ತಿದ್ರು. ಅದನ್ನು ಒಂದೂವರೆ ಕೋಟಿಗೆ ಹೆಚ್ಚಿಸುವಂತೆ ಕೇಳಿದ್ದೇನೆ. ಈ ತಿಂಗಳು ಒಂದು ಕೋಟಿ ಮುಂದಿನ ತಿಂಗಳಿನಿಂದ ಒಂದೂವರೆ ಕೋಟಿ ಲಸಿಕೆ ಕೊಡ್ತೀವಿ ಎಂದು ಹೇಳಿದ್ದಾರೆ. ಗಡಿ ಭಾಗದಲ್ಲಿ ಒಂದು ಡೋಸ್ ಕೊವಿಡ್ ಲಸಿಕೆ ಆಗಿದ್ದರೂ ಬಿಡುತ್ತಿದ್ದೆವು. ಇನ್ನುಮುಂದೆ ಎರಡೂ ಡೋಸ್ ಲಸಿಕೆ ಆದರೆ ಮಾತ್ರ ಬಿಡಲಾಗುತ್ತದೆ ಎಂದು ಹೇಳಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss