Friday, August 19, 2022

Latest Posts

ಕೊರೋನಾ ಅಬ್ಬರ: ಮತ್ತೆ ನೈಟ್​ ಕರ್ಫ್ಯೂ ಜಾರಿ, ಶಾಲಾ-ಕಾಲೇಜುಗಳು​ ಬಂದ್​

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಮಹಾರಾಷ್ಟ್ರದಲ್ಲಿ ನಿರಂತರವಾಗಿ ಕೊರೋನಾ ಸೋಂಕಿತರ ಪ್ರಕರಣ ಹೆಚ್ಚಾಗುತ್ತಿದ್ದು,ಈ ಹಿನ್ನೆಲೆ ಪುಣೆಯಲ್ಲಿ ನೈಟ್​ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಮಾರ್ಚ್​​ 31ರವರೆಗೆ ಶಾಲಾ-ಕಾಲೇಜುಗಳು​ ಬಂದ್​ ಇರಲಿವೆ.
ಮಹಾರಾಷ್ಟ್ರ ಡಿಸಿಎಂ ಅಜಿತ್​ ಪವಾರ್​ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ, ಈ ನಿರ್ಧಾರ ಕೈಗೊಳ್ಳಲಾಗಿದೆ. ಮುಂದಿನ ಪರಿಸ್ಥಿತಿಯನ್ನ ಅವಲೋಕಿಸಿ ಶಾಲೆಗಳನ್ನ ಪುನರಾಂಭಿಸಬೇಕೆ ಅಥವಾ ಬಂದ್​ ಮಾಡಬೇಕೆ ಅನ್ನೋದನ್ನು ನಿರ್ಧರಿಸಲಾಗುತ್ತೆ.
ಪ್ರಮುಖವಾಗಿ ರಾತ್ರಿ 11ರಿಂದ ಬೆಳಗ್ಗೆ 6 ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ. ಹೊಟೇಲ್ ​, ರೆಸ್ಟೋರೆಂಟ್​ ಮತ್ತು ಬಾರ್​​ ರಾತ್ರಿ 10 ಗಂಟೆಗೆ ಬಂದ್​ ಆಗಲಿದ್ದು, ಸದ್ಯ ಶೇ. 50ರಷ್ಟು ಸಾಮರ್ಥ್ಯದೊಂದಿಗೆ ಹೋಟೆಲ್​-ರೆಸ್ಟೋರೆಂಟ್​ ನಡೆಸಲು ಅನುಮತಿ ನೀಡಲಾಗಿದೆ.
ರಾತ್ರಿ 10ರಿಂದ 11ರವರೆಗೆ ಸರಕುಗಳ ಹೋಂ ಡೆಲಿವರಿ ಇರಲಿದ್ದು, ಮಾಲ್​, ಮಾರುಕಟ್ಟೆ, ಸಿನಿಮಾ ಹಾಲ್​ ರಾತ್ರಿ 10 ಗಂಟೆಯೊಳಗೆ ಬಂದ್​ ಆಗಿರಲಿವೆ. ಪ್ರಮುಖವಾಗಿ ಮದುವೆ ಕಾರ್ಯಕ್ರಮದಲ್ಲಿ ಕೇವಲ 50 ಜನರು ಸೇರಲು ಅವಕಾಶ ನೀಡಲಾಗಿದೆ.
ನಾಗ್ಪುರ​ದಲ್ಲಿ ಈಗಾಗಲೇ ಲಾಕ್​ಡೌನ್​ ಜಾರಿಗೊಳಿಸಲಾಗಿದ್ದು, ಇದರ ಬೆನ್ನಲ್ಲೇ ಇಂದು ರಾತ್ರಿಯಿಂದಲೇ ಅಕೋಲಾದಲ್ಲೂ ಲಾಕ್​ಡೌನ್ ಜಾರಿಗೊಳ್ಳಲಿದೆ. ಮಾರ್ಚ್​ 15ರವರೆಗೆ ಇದು ಜಾರಿಯಲ್ಲಿರಲಿದ್ದು, ಅಗತ್ಯ ಸೇವೆಗಳು ಸಿಗಲಿವೆ ಎಂದು ತಿಳಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!