spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, September 28, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕಾಸರಗೋಡು ಜಿಲ್ಲೆಯಲ್ಲಿ ಇಳಿಕೆಯಾಗದ ಕೊರೋನಾ ಅಬ್ಬರ: ಇಂದು 707 ಜನರಿಗೆ ಪಾಸಿಟಿವ್

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………

ಹೊಸದಿಗಂತ ವರದಿ ಕಾಸರಗೋಡು:

ಜಿಲ್ಲೆಯಲ್ಲಿ ಭಾನುವಾರ 707 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಈ ಪೈಕಿ 697 ಜನರಿಗೆ ಸಂಪರ್ಕದ ಮೂಲಕ ವೈರಸ್ ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 748 ಮಂದಿ ಸೋಂಕುಮುಕ್ತರಾದರು. ಇದೇ ವೇಳೆ ಕೇರಳದಲ್ಲಿ ಹೊಸದಾಗಿ 20,728 ಜನರಿಗೆ ಕೊರೋನಾ ವೈರಸ್ ದೃಢಗೊಂಡಿದೆ. ಇದರಲ್ಲಿ 19,960 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ರಾಜ್ಯದಲ್ಲಿ 17,792 ಜನರು ಗುಣಮುಖರಾದರು.
ಕೇರಳದ ಜಿಲ್ಲೆಗಳ ಪೈಕಿ ಮಲಪ್ಪುರಂ ಜಿಲ್ಲೆಯಲ್ಲಿ 3770, ತೃಶೂರು 2689, ಕಲ್ಲಿಕೋಟೆ 2434, ಎರ್ನಾಕುಳಂ 2246, ಪಾಲಕ್ಕಾಡು 1882, ಕೊಲ್ಲಂ 1336, ಕಣ್ಣೂರು 1112, ತಿರುವನಂತಪುರ 1050, ಆಲಪ್ಪುಳ 1046, ಕೋಟ್ಟಾಯಂ 963, ಕಾಸರಗೋಡು 707, ವಯನಾಡು 666, ಇಡುಕ್ಕಿ 441, ಪತ್ತನಂತ್ತಿಟ್ಟ ಜಿಲ್ಲೆಯಲ್ಲಿ 386 ಜನರಿಗೆ ಕೋವಿಡ್ ಪಾಸಿಟಿವ್ ಆಗಿದೆ. ಈ ಮಧ್ಯೆ ಕೇರಳದಲ್ಲಿ ಭಾನುವಾರ ಕೊರೋನಾ ಸೋಂಕು ಬಾಧಿಸಿ 56 ಮಂದಿ ಅಸುನೀಗಿದರು. ಈ ಮೂಲಕ ಇದುವರೆಗೆ ರಾಜ್ಯದಲ್ಲಿ ಒಟ್ಟು 16,837 ಜನರು ಮರಣ ಹೊಂದಿದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss