ಅಮೆರಿಕ ಅಧ್ಯಕ್ಷ ಜೋ ಬೈಡನ್ ಗೆ ಮತ್ತೆ ಕೊರೋನಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್

ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗೆ ಮತ್ತೆ ಕೊರೋನಾ ದೃಢಪಟ್ಟಿದೆ.
ಮೂರು ದಿನಗಳ ಕಾಲ ಪ್ರತ್ಯೇಕವಾಗಿ ಇದ್ದು ಅಲ್ಲಿಂದ ಹೊರಬಂದಿದ್ದರು. ಇದೀಗ ಶನಿವಾರ ಮತ್ತೆ ಪಾಸಿಟಿವ್​ ವರದಿ ಬಂದಿದೆ ಎಂದು ಶ್ವೇತಭವನ ತಿಳಿಸಿದೆ.
ಶ್ವೇತಭವನದ ವೈದ್ಯ ಡಾ. ಕೆವಿನ್ ಒ’ಕಾನ್ನರ್ ಮಾಹಿತಿ ನೀಡಿ, ಬೈಡನ್ ಯಾವುದೇ ರೋಗಲಕ್ಷಣಗಳನ್ನು ಅನುಭವಿಸಿಲ್ಲ, ಅವರು ಚೆನ್ನಾಗಿಯೇ ಇದ್ದಾರೆ. ಈ ಸಮಯದಲ್ಲಿ ಚಿಕಿತ್ಸೆಯನ್ನು ಪುನಾರಂಭಿಸಲು ನಿಖರವಾದ ಯಾವುದೇ ಕಾರಣವೂ ಇಲ್ಲ ಎಂದು ಹೇಳಿದರು.
ವೈದ್ಯರ ಪ್ರಕಾರ, ಇದು ಮರುಕಳಿಸುವಿಕೆಯ ಪ್ರಕರಣವಾಗಿದೆ. ಇದು ವಿರಳವಾಗಿ ಕಂಡುಬರುತ್ತದೆ. ಈಗ ಬೈಡನ್ ಕನಿಷ್ಠ 5 ದಿನಗಳ ಕಾಲ ಪ್ರತ್ಯೇಕವಾಗಿರುತ್ತಾರೆ.
79 ವರ್ಷದ ಬೈಡ​ನ್​ಗೆ ಕಳೆದ ವಾರ ಕೊರೊನಾ ಪಾಸಿಟಿವ್ ಎಂದು ಕಂಡುಬಂದಿತ್ತು. ಆ ಸಮಯದಲ್ಲಿ ಅವರು ವೈರಸ್‌ನ ಸಣ್ಣ ರೋಗಲಕ್ಷಣಗಳನ್ನು ಹೊಂದಿದ್ದರು. ನಂತರ ಪ್ರತ್ಯೇಕವಾಗಿ ಇದ್ದರು. ಇದಾದ ನಂತರ ಅವರು ಶ್ವೇತಭವನದ ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಮತ್ತು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆಗಳಲ್ಲಿ ಭಾಗವಹಿಸುತ್ತಿದ್ದರು.
ಅಧ್ಯಕ್ಷರು ಈ ಬಗ್ಗೆ ಟ್ವೀಟ್​ ಮಾಡಿ ಮಾಹಿತಿ ನೀಡಿದ್ದಾರೆ. ನಾನು ಚೆನ್ನಾಗಿದ್ದೇನೆ, ಎಲ್ಲವೂ ಚೆನ್ನಾಗಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!