spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಚೀನಾದಲ್ಲಿ ಮತ್ತೆ ಕೊರೋನಾ ಸ್ಫೋಟಕ್ಕೆ ಡೆಲ್ಟಾ ರೂಪಾಂತರಿ ಕಾರಣ: ಡ್ರ್ಯಾಗನ್ ವಾದ !

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………

ಹೊಸ ದಿಗಂತ ಎನ್ ಲೈನ್ ಡೆಸ್ಕ್

ತನ್ನ ವುಹಾನ್ ಪ್ರಯೋಗಾಲಯದಿಂದ ಇಡಿ ವಿಶ್ವಕ್ಕೆ ಕೊರೋನಾ ವೈರಾಣು ಪಿಡುಗನ್ನು ಹರಡಿ ಮನುಕುಲವನ್ನೇ ಘಾಸಿಗೊಳಿಸಿರುವ
ಚೀನಾ , ಇದೀಗ ತನ್ನ ದೇಶದಲ್ಲಿ ಮತ್ತೆ ಕೊರೋನಾ ಸೋಂಕು ವ್ಯಾಪಿಸಲಾರಂಭಿಸಿದ್ದು ಇದಕ್ಕೆ ಡೆಲ್ಟಾ ರೂಪಾಂತರಿಯೇ ಕಾರಣ ಎಂದು ಹೇಳಿಕೊಂಡಿದೆ. ಚೀನಾದ 14 ಪ್ರಾಂತಗಳಲ್ಲಿ ಕೋವಿಡ್ -19ಸೋಂಕು ಹರಡುತ್ತಿರುವುದಾಗಿ ಅದು ಹೇಳಿದೆ.
ಆದಾಗ್ಯೂ ಕೆಲವೆಡೆ ಸ್ಥಳೀಯವಾಗಿ ಕಂಡುಬಂದ ಕೊರೋನಾ ಸೋಂಕು ಕೂಡಾ ಹರಡುತ್ತಿದೆ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.ಇದೀಗ ಕೆಲವು ಪ್ರಾಂತಗಳಲ್ಲಿ ಲಾಕ್‌ಡೌನ್ ಘೋಷಿಸಲಾಗಿದ್ದು , ಲಕ್ಷಾಂತರ ಜನರು ಹೊರಗೆ ಬರದಂತಾಗಿದೆ ಎಂದೂ ವರದಿಗಳು ತಿಳಿಸಿವೆ. ವಿಶ್ವದಲ್ಲಿ ಕೊರೋನಾ ಹರಡಲು ತಾನು ಕಾರಣ ಎಂಬ ವಿಶ್ವ ರಾಷ್ಟ್ರಗಳ ಆರೋಪವನ್ನು ನಿರಾಕರಿಸುತ್ತಲೇ ಬಂದಿರುವ ಚೀನಾ ಈಗ ಡೆಲ್ಟಾ ರೂಪಾಂತರಿ ಬಗ್ಗೆ ಮಾತನಾಡಿರುವುದು ಗಮನ ಸೆಳೆದಿದೆ. ಚೀನಾ ಕೊರೋನಾ ಸೋಂಕು ಹರಡುವಿಕೆಗೆ ತಾನು ಕಾರಣ ಎಂಬುದನ್ನು ಮುಚ್ಚಿಹಾಕಲು ಮತ್ತು ಚೀನಾ ವಾದದ ಪ್ರಚಾರಕ್ಕಾಗಿ ಅಮೆರಿಕದ ಮಾಧ್ಯಮಗಳಿಗೆ ಭಾರೀ ಪ್ರಮಾಣದಲ್ಲಿ ಹಣ ಸುರಿದಿರುವ ಬಗ್ಗೆ ಇತ್ತೀಚೆಗೆ ವರದಿಗಳು ಬಂದಿರುವುದಿಲ್ಲಿ ಉಲ್ಲೇಖನೀಯ.
ಪೂರ್ವದ ಜಿಯಾಂಗ್ಸು ಪ್ರಾಂತದ ನಂಜಿಂಗ್ ವಿಮಾನ ನಿಲ್ದಾಣದಿಂದ ಈ ಸೋಂಕು ಹರಡಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಇಲಾಖೆ ವಕ್ತಾರ ಮಿ ಫೆಂಗ್ ಹೇಳಿದ್ದಾರೆ. ಶನಿವಾರ ಫುಜಿಯನ್ ಮತ್ತು ಛೊಂಗ್‌ಖಿಂಗ್ ಪ್ರಾಂತಗಳಿಗೂ ಕೊರೋನಾ ಹರಡಿದ್ದು, ಝೆಂಗ್ಜೌ ಪ್ರಾಂತದಲ್ಲಿ ಲಕ್ಷಣಗಳಿಲ್ಲದ ಪ್ರಕರಣ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೋವಿಡ್ ಲಸಿಕೆ ಡೆಲ್ಟಾ ರೂಪಾಂತರಿ ವಿರುದ್ಧ ರಕ್ಷಣೆ ನೀಡುವಲ್ಲಿ ಒಂದಷ್ಟು ದುರ್ಬಲವಾಗಿರುವುದು ಕೆಲವು ಪ್ರಕರಣಗಳಲ್ಲಿ ಕಂಡುಬಂದಿರಬಹುದಾದರೂ ಒಟ್ಟಾರೆಯಾಗಿ ಲಸಿಕೆ ಉತ್ತಮ ರಕ್ಷಣೆ ನೀಡಬಲ್ಲುದಾಗಿದೆ ಎಂದು ಚೀನಾದ ವೈರಾಣು ತಜ್ಞ ಫೆಂಗ್ ಝಿಜಿಯನ್ ಹೇಳಿಕೊಂಡಿದ್ದಾರೆ.ಈವರೆಗೆ 1.6ಬಿ.ಡೋಸ್ ಲಸಿಕೆ ನೀಡಲಾಗಿದೆ ಎಂದ ಚೀನೀ ಅಧಿಕಾರಿಗಳು , ಎಷ್ಟು ಜನರಿಗೆ ಈವರೆಗೆ ಲಸಿಕೆ ನೀಡಲಾಗಿದೆ ಎಂಬ ವಿವರ ನೀಡಿಲ್ಲ.ಆದರೆ ವರ್ಷಾಂತ್ಯದೊಳಗೆ ಚೀನಾದ ಶೇ.80ರಷ್ಟು ಪ್ರಜೆಗಳಿಗಾದರೂ ಲಸಿಕೆ ನೀಡಬೇಕೆಂಬುದು ಸರಕಾರದ ಗುರಿ ಎಂದಿದ್ದಾರೆ. ಕಮ್ಯುನಿಸ್ಟ್ ಚೀನಾದಲ್ಲಿ ಮಾಧ್ಯಮ ಸ್ವಾತಂತ್ರ್ಯ ಇಲ್ಲದ ಕಾರಣ ಅಲ್ಲಿನ ನೈಜ ಮಾಹಿತಿಗಳು ಹೊರಜಗತ್ತಿಗೆ ಗೊತ್ತಾಗುತ್ತಿಲ್ಲ .

 

 

 

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss