Saturday, July 2, 2022

Latest Posts

ಫ್ರಾನ್ಸ್ ನಲ್ಲಿ 1 ಲಕ್ಷಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದ ಕೊರೋನಾ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಫ್ರಾನ್ಸ್ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಜೊತೆಗೆ ಸಾವಿನ ಸಂಖ್ಯೆ ವೇಗವಾಗಿ ಏರುತ್ತಿದೆ. ಇದುವರೆಗೆ ದೇಶದಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಈ ಮೂಲಕ ಮಹಾಮಾರಿಯಿಂದ ಅತಿ ಹೆಚ್ಚು ಸಾವು ಕಂಡ ಜಗತ್ತಿನ ದೇಶಗಳ ಪೈಕಿ ಫ್ರಾನ್ಸ್ 3ನೇ ಸ್ಥಾನದಲ್ಲಿದೆ.
.ಈ ಕುರಿತು ಟ್ವೀಟ್​ ಮೂಲಕ ಬೇಸರ ವ್ಯಕ್ತಡಿಸಿರುವ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ದೇಶದಲ್ಲಿ 1 ಲಕ್ಷ ಜನ ವೈರಸ್‌ಗೆ ಬಲಿಯಾಗಿದ್ದು, ಈ ವೈರಸ್​ ತುಂಬಾ ಕ್ರೂರಿ, ಕೊನೆಯ ಕ್ಷಣಗಳಲ್ಲಿ ನಮ್ಮ ತಂದೆ, ತಾಯಿ, ಪ್ರೀತಿಪಾತ್ರರು, ಸ್ನೇಹಿತರ ಜೊತೆ ಕಾಲ ಕಳೆಯುವುದನ್ನೂ ಕಿತ್ತುಕೊಂಡಿದೆ. ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬಸ್ಥರ ಕುರಿತು ಗಮನ ಹರಿಸಲಾಗುವುದು ಎಂದು ತಿಳಿಸಿದ್ದಾರೆ.
ಗುರುವಾರ ಫ್ರಾನ್ಸ್​ನಲ್ಲಿ 300 ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 100,077 ಕ್ಕೆ ಏರಿಕೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss