Saturday, August 13, 2022

Latest Posts

ಕೋವಿಡ್ ಲಸಿಕೆ ಪಡೆದ ಎರಡೇ ದಿನದಲ್ಲಿ ಸಚಿವರಿಗೆ ಕೊರೋನಾ ದೃಢ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ಲಸಿಕೆ ಪಡೆದ ಎರಡೇ ದಿನಕ್ಕೆ ಗುಜರಾತ್ ಸಚಿವ ಈಶ್ವರ್ ಸಿನ್ಹಾ ಪಟೇಲ್ ಅವರಿಗೆ ಕೋವಿಡ್-19 ದೃಢಪಟ್ಟಿದೆ.

ಮಾರ್ಚ್ 13ರಂದು ಸಚಿವರು ಕೊರೋನಾ ಲಸಿಕೆಯನ್ನು ಪಡೆದಿದ್ದರು. ಮಾರ್ಚ್ 15ರಂದು ವೈದ್ಯಕೀಯ ತಪಾಸಣೆ ನಡೆಸಲಾಗಿದ್ದು,  ಕೊರೋನಾ ಸೋಂಕು ತಗುಲಿರುವುದು ಮಂಗಳವಾರ ಹೊರಬಂದ ವರದಿಯಲ್ಲಿ ಸ್ಪಷ್ಟವಾಗಿದೆ.

ಈ ಕುರಿತು ಈಶ್ವರ್ ಸಿನ್ಹಾ ಪಟೇಲ್ ಟ್ವೀಟ್ ಮಾಡಿದ್ದು, ನಾನು ಆರೋಗ್ಯವಾಗಿದ್ದೇನೆ. ಮುನ್ನೆಚ್ಚರಿಕೆ ಕ್ರಮವಾಗಿ ನನ್ನ ಸಂಪರ್ಕಕ್ಕೆ ಬಂದವರು ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss