Thursday, July 7, 2022

Latest Posts

ರಾಮನಗರದ ವಸತಿ ಶಾಲೆಯ 19 ವಿದ್ಯಾರ್ಥಿಗಳಿಗೆ ಕೊರೋನಾ: ಪಾಲಕರಲ್ಲಿ ಆತಂಕ

ಹೊಸದಿಗಂತ ವರದಿ, ಕಾರವಾರ:

ಜಿಲ್ಲೆಯ ಜೊಯಿಡಾ ತಾಲೂಕಿನ ರಾಮನಗರದ ಕಿತ್ತೂರು ಚೆನ್ನಮ್ಮ ವಸತಿ ಶಾಲೆಯ 19 ಜನ ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ದೃಡ ಪಟ್ಟಿದ್ದು ಪಾಲಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ವಸತಿ ಶಾಲೆಯಲ್ಲಿ 205 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಎರಡು ದಿನಗಳ ಹಿಂದೆ ಮೂವರು ವಿದ್ಯಾರ್ಥಿಗಳಲ್ಲಿ ಕೋವಿಡ್ ಪಾಸಿಟಿವ್ ಇರುವುದು ದೃಡಪಟ್ಟಿತ್ತು.
ಸೋಮವಾರ ಮತ್ತೆ 16 ಜನರಲ್ಲಿ ಸೋಂಕು ದೃಡಪಡುವ ಮೂಲಕ ಒಟ್ಟು 19 ಜನರಲ್ಲಿ ಸೋಂಕು ದೃಡಪಟ್ಟಂತಾಗಿದೆ.
ಕಾರವಾರ ಉಪವಿಭಾಗ ಅಧಿಕಾರಿ ವಿದ್ಯಾಶ್ರೀ ಚಂದರಗಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರದ ನಾಯಕ ಸ್ಥಳಕ್ಕೆ ಭೇಟಿ ನೀಡಿದ್ದು ವಸತಿ ಶಾಲೆಯ ಮೇಲ್ಮಹಡಿಯಲ್ಲಿ
ಸೋಂಕಿತರಿಗೆ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss