Thursday, August 11, 2022

Latest Posts

ತಿರುಮಲ ವೇದಿಕ್ ಸ್ಕೂಲ್​ನ 50 ವಿದ್ಯಾರ್ಥಿಗಳಿಗೆ ಕೊರೋನಾ!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಆಂಧ್ರ ಪ್ರದೇಶದ ತಿರುಮಲ ಧರ್ಮಗಿರಿ ವೇದಿಕ್ ಸ್ಕೂಲ್​ನ ಸುಮಾರು 50 ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ.
ಸೋಂಕಿತ ವಿದ್ಯಾರ್ಥಿಗಳನ್ನು ತಿರುಪತಿಯ ಪದ್ಮಾವತಿ ಕೋವಿಡ್ ಕೇರ್ ಸೆಂಟರ್​​ಗೆ ರವಾನೆ ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಕೊರೋನಾ ಕಾರಣದಿಂದ ಮುಚ್ಚಲ್ಪಟ್ಟಿದ್ದ ವೇದಶಾಲೆಯನ್ನು ಕೆಲವೇ ದಿನಗಳ ಹಿಂದೆ ತೆರೆಯಲಾಗಿತ್ತು. ಕೊರೋನಾ ಸೋಂಕು ಇರದ ವಿದ್ಯಾರ್ಥಿಗಳನ್ನು ಸುರಕ್ಷತಾ ಕ್ರಮವಾಗಿ ಈಗಾಗಲೇ ಕ್ವಾರಂಟೈನ್ ಮಾಡಲಾಗಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss