ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………..
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಮನುಷ್ಯರನ್ನು ಹಿಂಡಿ ಹಿಪ್ಪೆ ಮಾಡುತ್ತಿರುವ ಕೊರೋನಾ ಇದೀಗ ಪ್ರಾಣಿಗಳ ಜೀವ ಹಿಂಡೋಕೆ ಪ್ರಾರಂಭಿಸಿದೆ. ಇದೀಗ ಜೈಪುರ ಮೃಗಾಲಯದ ತ್ರಿಪುರ ಹೆಸರಿನ ಸಿಂಹಕ್ಕೂ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಜೈಪುರದಿಂದ 13 ಪ್ರಾಣಿಗಳಿಗೆ ಕೊರೋನಾ ಪರೀಕ್ಷೆ ಮಾಡಲಾಗಿತ್ತು. ಮೂರು ಸಿಂಹಗಳು, ಮೂರು ಹುಲಿಗಳು ಮತ್ತು ಒಂದು ಪ್ಯಾಂಥರ್ ಪ್ರಾಣಿಗಳ ಮಾದರಿಯನ್ನು ಪರೀಕ್ಷೆ ನಡೆಸಲಾಗಿತ್ತು.
ಹಾಗೆಯೇ ಪಂಜಾಬ್ ನ ಚತ್ ಬೀರ್ ಮೃಗಾಲಯದಿಂದ ಮೂರು ಹುಲಿಗಳು, ಒಂದು ಸಿವೆಟ್ ಬೆಕ್ಕು, ಒಂದು ಕಪ್ಪು ಬಕ್, ಅಲ್ಲದೆ ಬರೇಲಿಯ ಒಂದು ಕಪ್ಪು ಬಕ್ ಪ್ರಾಣಿಗಳನ್ನು ಪರೀಕ್ಷೆ ಮಾಡಲಾಗಿತ್ತು. ಈ ಎಲ್ಲ ಪ್ರಾಣಿಗಳ ಕೊವಿಡ್ ವರದಿ ನೆಗೆಟಿವ್ ಬಂದಿದೆ.
ಕೆಲವು ದಿನಗಳ ಹಿಂದೆ ಹೈದರಾಬಾದ್ನ ನೆಹರು ವನ್ಯಜೀವಿ ಉದ್ಯಾನವನದಲ್ಲಿದ್ದ ಎಂಟು ಸಿಂಹಗಳಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು.