Saturday, July 2, 2022

Latest Posts

ನಾಳೆಯಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ: ಲಸಿಕಾ ಕೇಂದ್ರಗಳ ಮುಂದೆ ಸಾಲುಗಟ್ಟಿ ನಿಲ್ಲಬೇಡಿ ಎಂದ ಕೇಜ್ರಿವಾಲ್

ಹೊಸದಿಗಂತ ಆನ್ ಲೈನ್ ಡೆಸ್ಕ್:

18 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ನೀಡಲು ಅವಕಾಶ ಒದಗಿಸಿರುವ ಲಸಿಕಾ ಅಭಿಯಾನ ನಾಳೆಯಿಂದ(ಮೇ 1) ದೇಶಾದ್ಯಂತ ಆರಂಭವಾಗಲಿದ್ದು, ಆದರೆ, ನಾಳೆ ಲಸಿಕಾ ಕೇಂದ್ರಗಳ ಮುಂದೆ ಸಾಲುಗಟ್ಟಿ ನಿಲ್ಲಬೇಡಿ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ರಾಷ್ಟ್ರ ರಾಜಧಾನಿಯ ಜನರನ್ನು ಕೇಳಿಕೊಂಡಿದ್ದಾರೆ.
ಲಸಿಕೆಗಳು ನಮಗಿನ್ನೂ ಡೆಲಿವರ್ ಆಗಿಲ್ಲ. ನಾವು ಲಸಿಕೆ ಕಂಪೆನಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ನಾಳೆ ಅಥವಾ ನಾಡಿದ್ದು ಲಸಿಕೆ ತಲುಪಬಹುದು ಎಂದು ಆಶಿಸುತ್ತೇವೆ. ಮೊದಲು ಕೋವಿಶೀಲ್ಡ್​​ನ 3 ಲಕ್ಷ ಡೋಸ್​ಗಳನ್ನು ನೀಡುತ್ತಾರೆ ಎಂದಿರುವ ಸಿಎಂ, ಲಸಿಕೆ ಲಭ್ಯವಾದ ಕೂಡಲೇ ಜನರಿಗೆ ತಿಳಿಸಲಾಗುವುದು ಎಂದಿದ್ದಾರೆ.
ದಯವಿಟ್ಟು ನಾಳೆ ಲಸಿಕಾ ಕೇಂದ್ರಗಳ ಹೊರಗೆ ಸಾಲುಗಟ್ಟಿ ನಿಲ್ಲಬೇಡಿ. ಇದರಿಂದ ಕಾನೂನು ಸುವ್ಯವಸ್ಥೆಯ ಸಮಸ್ಯೆ ಉಂಟಾಗಬಹುದು. ಸಾಮಾಜಿಕ ಅಂತರ ಇಲ್ಲದಂಥ ಸನ್ನಿವೇಶವೂ ಬರಬಹುದ’ ಎಂದು ಸಿಎಂ ಹೇಳಿದ್ದಾರೆ. 18 ವರ್ಷ ಮೇಲ್ಪಟ್ಟವರಿಗೆಲ್ಲಾ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss