ಹೊಸವರ್ಷಕ್ಕೆ 90% ಬುಕ್ಕಿಂಗ್ ಪೂರೈಸಿದ್ದ ಹೊಟೇಲ್ ಮಾಲೀಕರಿಗೆ ಕೊರೋನಾ ಕೊಟ್ಟಿದೆ ಶಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊರೋನಾ ಛಾಯೆ ಇಲ್ಲದೆ ಈ ಬಾರಿ ಅದ್ಧೂರಿಯಾಗಿ ಹೊಸವರ್ಷಾಚರಣೆಗೆ ತಯಾರಾಗಿದ್ದ ಹೊಟೇಲ್ ಮಾಲೀಕರಿಗೆ ಕೊರೋನಾ ಶಾಕ್ ನೀಡಿದೆ. ಹೋಗೇಬಿಟ್ಟಿದೆ ಎಂದುಕೊಂಡ ಸಮಯದಲ್ಲಿ ಮತ್ತೆ ಕೊರೋನಾ ಬರುವ ಸಾಧ್ಯತೆ ಇದ್ದು, ಹೊಟೇಲ್ ಮಾಲೀಕರು ಆರ್ಥಿಕವಾಗಿ ಬೀಳುವ ಹೊಡೆತದ ಬಗ್ಗೆ ಆಲೋಚಿಸುತ್ತಿದ್ದಾರೆ.

ಈಗಾಗಲೇ ಶೇ.೯೦ರಷ್ಟು ಹೊಟೇಲ್, ರೆಸಾರ್ಟ್‌ಗಳು ಮುಂಡಗ ಬುಕ್ಕಿಂಗ್ ಆಗಿವೆ. ಹೊಸ ವರ್ಷಕ್ಕಾಗಿ ಭರ್ಜರಿ ತಯಾರಿ ಕೂಡ ಮಾಡಲಾಗಿದೆ. ಈ ಮಧ್ಯೆ ಕೊರೋನಾ ಬಂದರೆ ನಿಯಮಗಳಿಂದ ವ್ಯಾಪಾರಕ್ಕೆ ತೊಂದರೆಯಾಗುವ ಭಯದಲ್ಲಿ ಮಾಲೀಕರಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ಆದ ನಷ್ಟವನ್ನು ತುಂಬಿಕೊಳ್ಳೋದಕ್ಕೆ ಮಾಲೀಕರು ತಯಾರಾಗಿದ್ದರು. ಆದರೆ ಈ ಬಾರಿಯೂ ಕೊರೋನಾ ಅಬ್ಬರಿಸುವ ಸಾಧ್ಯತೆ ಇದ್ದು, ಸಂಭ್ರಮಾಚರಣೆಗೆ ಕೊರೋನಾ ಕರಿನೆರಳು ಬಿದ್ದಿದೆ. ಮುಂಗಡವಾಗಿ ಹೊಟೇಲ್ ರೂಮ್‌ಗಳಿಗೆ ಹಣ ಪಾವತಿಯಾಗಿದೆ.

ಆ ಹಣದಲ್ಲಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇವೆ. ಈಗ ಅವರಿಗೆ ವಾಪಾಸ್ ನೀಡೋಕೆ ಹಣ ಇಲ್ಲ ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ನಮಗೆ ನಷ್ಟವಾಗುತ್ತದೆ ಎಂದು ಹೊಟೇಲ್ ಮಾಲೀಕರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!