ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, June 25, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೊರೋನಾ ಹೆಚ್ಚಳ: ಮೇ.9 ರಿಂದ ಶತಾಬ್ದಿ ಸಹಿತ 28 ರೈಲುಗಳು ಸ್ಥಗಿತ

 ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆ ಉತ್ತರ ರೈಲ್ವೆ ಗುರುವಾರ ಪ್ರಮುಖ ನಿರ್ಧಾರ ಕೈಗೊಂಡಿದ್ದು, ರಾಜಧಾನಿ, ಶತಾಬ್ದಿ, ಜನ್ ಶತಾಬ್ದಿ, ವಂದೇ ಭಾರತ್, ಡುರೊಂಟೊ ಸೇರಿದಂತೆ ನವದೆಹಲಿಯಿಂದ 28 ರೈಲುಗಳನ್ನ ರದ್ದುಗೊಳಿಸಿದೆ. ಈ ಎಲ್ಲಾ ರೈಲುಗಳನ್ನ ಮೇ 6, 9, 10, 11 ಮತ್ತು 12ರಿಂದ ಮುಂದಿನ ಆದೇಶದವರೆಗೆ ರದ್ದುಗೊಳಿಸಲಾಗಿದೆ.
ಮುಖ್ಯವಾಗಿ ಕಳಪೆ ನಿರ್ವಹಣೆ ಮತ್ತು ನಿರಂತರವಾಗಿ ಕೊರೊನಾ ಪ್ರಕರಣಗಳಿಂದಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಉತ್ತರ ರೈಲ್ವೆ ಹೇಳಿದೆ.
ಈ ಮೊದಲು ಬುಧವಾರ, ರೈಲ್ವೆ ಸುಮಾರು 18 ರೈಲುಗಳನ್ನ ರದ್ದುಗೊಳಿಸಲು ನಿರ್ಧರಿಸಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss