spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕರ್ನಾಟಕ ಸಹಿತ 10 ರಾಜ್ಯಗಳಲ್ಲಿ ಕೊರೋನಾ ಹೆಚ್ಚಳ: 1,800 ಕೋಟಿ ರೂ. ನೀಡಿದ ಕೇಂದ್ರ ಸರಕಾರ!

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕಳೆದ ಹಲವು ದಿನಗಳಿಂದ ನಿಯಂತ್ರಣದಲ್ಲಿಂದ ಕೊರೋನಾ ಸೋಂಕಿನ ಪ್ರಮಾಣ ಕೆಲವೊಂದು ರಾಜ್ಯಗಳಲ್ಲಿ ದಿಢೀರ್​ ಆಗಿ ಉಲ್ಭಣಗೊಂಡಿದ್ದು, ಕರ್ನಾಟಕ ಸೇರಿದಂತೆ 10 ರಾಜ್ಯಗಳಲ್ಲಿ ಇದರ ಆರ್ಭಟ ಮತ್ತಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.
ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್​ ಭೂಷಣ್ ಮಾತನಾಡಿದ್ದು, ದೇಶದ 10 ರಾಜ್ಯಗಳಲ್ಲಿ ವೈರಸ್​ ಏರಿಕೆಯಾಗುತ್ತಿದ್ದು, ಶೇ. 80ರಷ್ಟು ಪ್ರಕರಣಗಳು ಇಲ್ಲಿ ಕಂಡು ಬರುತ್ತಿವೆ. ಅದರ ನಿಯಂತ್ರಣಕ್ಕಾಗಿ ಇಂದು ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಲಾಗಿದೆ ಎಂದರು.
ಕೋವಿಡ್​ ಸೋಂಕಿತ ಪ್ರಕರಣ ಹೆಚ್ಚುತ್ತಿರುವ ಕಾರಣದಿಂದಾಗಿ ಕೇಂದ್ರ ಸರ್ಕಾರ 10 ರಾಜ್ಯಗಳಲ್ಲಿನ ಕೋವಿಡ್ ಪರಿಸ್ಥಿತಿ ಪರಿಶೀಲಿಸಿದೆ. ಪ್ರಮುಖವಾಗಿ ಕೇರಳ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ, ಅಸ್ಸೋಂ, ಮಿಜೋರಾಂ, ಮೇಘಾಲಯ, ಮಣಿಪುರ್ ರಾಜ್ಯಗಳಲ್ಲಿ ಪ್ರಕರಣಗಳು ಉಲ್ಬಣಗೊಳ್ಳುತ್ತಿದ್ದು, ಮತ್ತಷ್ಟು ಎಚ್ಚರಿಕೆ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ ಎಂದಿದ್ದಾರೆ.
ಕೋವಿಡ್​ ನಿಯಂತ್ರಣಕ್ಕೆ ತರಲು ನೆರೆಹೊರೆ, ಸಮುದಾಯ, ಗ್ರಾಮ, ಮೊಹಲ್ಲಾ, ವಾರ್ಡ್​ಗಳಲ್ಲಿ ಕೋವಿಡ್​ ನಿಯಂತ್ರಣ ಮಾರ್ಗಸೂಚಿ ಅವಶ್ಯಕವಾಗಿದೆ ಎಂದು ರಾಜೇಶ್​ ಭೂಷಣ್​ ತಿಳಿಸಿದ್ದಾರೆ.
ಕೋವಿಡ್ ಹೋರಾಟಕ್ಕೆ 1,800 ಕೋಟಿ ರೂ. ನೀಡಿದ ಕೇಂದ್ರ
ಕೊರೋನಾ​ ವಿರುದ್ಧದ ಹೋರಾಟಕ್ಕಾಗಿ ಕೇಂದ್ರ ಸರ್ಕಾರ ಇದೀಗ 1,827.80 ಕೋಟಿ ರೂ. ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಿದ್ದಾಗಿ ತಿಳಿಸಿದೆ.
ಕೇಂದ್ರ ಆರೋಗ್ಯ ಸಚಿವರಾಗಿರುವ ಮಾನ್ಸುಕ್​ ಮಾಂಡೋವಿಯಾ ಇದರ ಬಗ್ಗೆ ಟ್ವಿಟ್ ಮಾಡಿ ಮಾಹಿತಿ ಹೊರಹಾಕಿದ್ದು, ಕರ್ನಾಟಕಕ್ಕೆ 75.61 ಕೋಟಿ ರೂ. ಮಹಾರಾಷ್ಟ್ರಕ್ಕೆ 123.12 ಕೋಟಿ ರೂ. ತೆಲಂಗಾಣಕ್ಕೆ 44.80 ಕೋಟಿ ರೂ. ಆಂಧ್ರಪ್ರದೇಶಕ್ಕೆ 62.69 ಕೋಟಿ ರೂ. ಗುಜರಾತ್​ಗೆ 71.88 ಕೋಟಿ ರೂ. ನೀಡಿದ್ದಾಗಿ ತಿಳಿಸಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss