ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, June 25, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಭಾರತದಲ್ಲಿ ಕೊರೋನಾ ಹೆಚ್ಚಳ: ಸ್ವಿಸ್ ಆರ್ಚರಿ ವಿಶ್ವಕಪ್ ನಲ್ಲಿ ಭಾರತೀಯ ಆಟಗಾರರಿಗೆ ವೀಸಾ ನಿರಾಕರಣೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಸ್ವಿಟ್ಜರ್ಲೆಂಡ್ ನಲ್ಲಿ ಆಯೋಜನೆಯಾಗಿರುವ ಆರ್ಚರಿ ವಿಶ್ವಕಪ್ನಲ್ಲಿ ಭಾರತೀಯರಿಗೆ ಸ್ಪರ್ಧಿಸಲು ಅವಕಾಶ ಇಲ್ಲದಂತಾಗಿದ್ದು,ಕೊರೋನಾ ಸೋಂಕು ಉಲ್ಪಣವಾಗಿರುವ ಹಿನ್ನಲೆಯಲ್ಲಿ ಭಾರತೀಯ ಆಟಗಾರರಿಗೆ ವೀಸಾ ನಿರಾಕರಿಸಲಾಗಿದೆ.
ಭಾರತ ಮೂಲದ ಬಿಲ್ಲುಗಾರರು ಹಾಲಿ ಆರ್ಚರಿ ವಿಶ್ವಕಪ್ ನಿಂದ ದೂರ ಉಳಿಯುವಂತಾಗಿದ್ದು, ಅವರ ವೀಸಾ ಅರ್ಜಿಗಳನ್ನು ಸ್ವಿಟ್ಜರ್ಲೆಂಡ್ ರಾಯಭಾರ ಕಚೇರಿ ತಿರಸ್ಕರಿಸಿದೆ. ಸ್ವಿಸ್ ನ ಲೌಸಾನ್ ನಲ್ಲಿ ನಡೆಯುತ್ತಿರುವ 2ನೇ ಹಂತದ ವಿಶ್ವಕಪ್ ಟೂರ್ನಿಯಿಂದ ಭಾರತ ತಂಡ ಪಾಲ್ಗೊಳ್ಳದಂತಾಗಿದೆ. ಆದರೆ ಪ್ಯಾರಿಸ್ ನಲ್ಲಿ ನಡೆಯಲಿರುವ ಮೂರನೇ ಹಂತದ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಬಿಲ್ಲುಗಾರರು ನೇರವಾಗಿ ಪಾಲ್ಗೊಳ್ಳಲ್ಲಿದ್ದಾರೆ. ಇದು ಭಾರತದ ಮಹಿಳಾ ತಂಡದ ಕೊನೆಯ ಒಲಿಂಪಿಕ್ ಅರ್ಹತಾ ಪಂದ್ಯವಾಗಿದೆ. ಏಳು ದಿನಗಳ ಸ್ಪರ್ಧೆ ಜೂನ್ 23 ರಿಂದ ಪ್ರಾರಂಭವಾಗಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಆರ್ಚರಿ ಅಸೋಸಿಯೇಶನ್ ಆಫ್ ಸೆಕ್ರೆಟರಿ ಜನರಲ್ ಪ್ರಮೋದ್ ಚಂದುರ್ಕರ್, ‘ಸ್ವಿಸ್ ರಾಯಭಾರ ಕಚೇರಿ ಯಾವುದೇ ಅಲ್ಪಾವಧಿಯ ವೀಸಾವನ್ನು ಅನುಮತಿಸಲಿಲ್ಲ. ಆದರೂ ನಮಗೆ ನಿರಾಸೆ ಇಲ್ಲ. ಪ್ರಸ್ತುತ ನಮ್ಮ ಗಮನ ಪ್ಯಾರಿಸ್ ನಲ್ಲಿ ನಡೆಯಲಿರುವ 3ನೇ ಹಂತದ ಮೇಲಿದ್ದು, 2ನೇ ಹಂತದ ವಿಶ್ವಕಪ್ ಸಮಯದಲ್ಲಿ ನಮಗೆ ಉತ್ತಮ ಅಭ್ಯಾಸಕ್ಕೆ ಸಮಯ ದೊರೆತಿದೆ ಎಂದು ಹೇಳಿದ್ದಾರೆ. ಭಾರತದ ಮಹಿಳಾ ಮತ್ತು ಪುರುಷರ ತಂಡ ಈ ವರೆಗೂ ಟೋಕಿಯೋ ಟೂರ್ನಿವರೆಗೂ ಅರ್ಹತೆ ಪಡೆದಿದೆ. ಆರ್ಚರಿ ರಾಷ್ಟ್ರೀಯ ಒಕ್ಕೂಟವು ಪ್ಯಾರಿಸ್ ತಲುಪಿದಾಗ ತನ್ನ ಬಿಲ್ಲುಗಾರರಿಗೆ 10 ದಿನಗಳ ಕಡ್ಡಾಯ ಸಂಪರ್ಕತಡೆ ನಿಯಮ ಸಡಿಲಿಕೆ ನಿರೀಕ್ಷಿಸಬಹುದು ಎಂದು ಹೇಳಿದ್ದಾರೆ.
’10 ದಿನಗಳ ಕ್ಯಾರಂಟೈನ್ ಸಮಯದಲ್ಲಿ ಬಿಲ್ಲುಗಾರರಿಗೆ ಅಭ್ಯಾಸಕ್ಕಾಗಿ ಕನಿಷ್ಠ ಪ್ರಯಾಣಿಸಲು ಅವಕಾಶ ಮಾಡಿಕೊಡಲು ನಾವು ಫ್ರೆಂಚ್ ಒಕ್ಕೂಟಕ್ಕೆ ಪತ್ರ ಬರೆಯಲು ಮುಂದಾಗಿದ್ದೇವೆ. ಫೆಡರೇಶನ್ ಸಹ ತಂಡದ ಪಟ್ಟಿಯನ್ನು ಪ್ಯಾರಿಸ್ಗೆ ಕಳುಹಿಸುತ್ತದೆ ಎಂದು ಚಂದುರ್ಕರ್ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss