Wednesday, June 29, 2022

Latest Posts

ಬಾಲಿವುಡ್​ ಅಂಗಳದಲ್ಲೂ ಕೊರೋನಾ ಸದ್ದು: ಅರ್ಜುನ್​ ಕಪೂರ್​, ರಿಯಾ,ಅನ್ಶುಲಾಗೆ ಸೋಂಕು ದೃಢ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ದಿನೇ ದಿನೇ ಕೊರೋನಾ ಹೆಚ್ಚುತ್ತಿರುವ ನಡುವೆ ಬಾಲಿವುಡ್​ ಅಂಗಳದಲ್ಲೂ ಸದ್ದು ಮಾಡುತ್ತಿದ್ದು,ಬಾಲಿವುಡ್ ನಟ ಅರ್ಜುನ್​ ಕಪೂರ್​​ಗೂ ಸೋಂಕು ದೃಢಗೊಂಡಿದೆ.
ಇತ್ತಿಚೇಗೆ ಕರೀನಾ ಕಪೂರ್​ ಸೋಂಕಿಗೊಳಗಾಗಿದ್ದರು. ಇದರ ಬೆನ್ನಲ್ಲೇ ಇದೀಗ ಅರ್ಜುನ್​ ಕಪೂರ್​, ರಿಯಾ ಕಪೂರ್​, ಕರಣ್​ ಬೊಲಾನಿ, ಅನ್ಶುಲಾಗೆ ಸೋಂಕು ದೃಢಗೊಂಡಿದೆ. ಇವರೆಲ್ಲರೂ ಮುನ್ನೆಚ್ಚರಿಕೆಯಾಗಿ ಈಗಾಗಲೇ ಕ್ವಾರಂಟೈನ್​ಗೊಳಗಾಗಿದ್ದಾರೆ.
ಕ್ರಿಸ್​ಮಸ್​ ಸಂಭ್ರಮದಲ್ಲಿ ಬಾಲಿವುಡ್​ನ ಅನೇಕರು ಕೊರೋನಾ ಮಾರ್ಗಸೂಚಿ ನಿರ್ಲಕ್ಷ್ಯ ತೋರಿದ್ದು, ಇದರ ಪರಿಣಾಮ ಸೋಂಕು ದೃಢಪಡುತ್ತಿದೆ.
ಅರ್ಜುನ್ ಮತ್ತು ಅನ್ಶುಲಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅರ್ಜುನ್ ಗೆಳತಿ ಮಲೈಕಾ ಅರೋರಾ ಕೊರೋನಾ ಪರೀಕ್ಷೆ ನಡೆಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss