ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………………………
ಹೊಸ ದಿಗಂತ ವರದಿ ಉಡುಪಿ:
ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಕೋವಿಡ್ ಪೀಡಿತರ ಸಂಖ್ಯೆ ಮಿತಿ ಮೀರುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಯ ದಾದಿಯರ ತಂಡವೊಂದು ಶುಶ್ರೂಷೆಗಾಗಿ ಮಂಗಳವಾರ ದಿಲ್ಲಿಗೆ ಪ್ರಯಾಣ ಬೆಳೆಸಿದೆ.
ಮಣಿಪಾಲ ಸಂಸ್ಥೆಯ ಸಹಸಂಸ್ಥೆ, ದಿಲ್ಲಿಯ ಮಣಿಪಾಲ ದ್ವಾರಕಾ ಆಸ್ಪತ್ರೆ ಬೇಡಿಕೆ ಮೇರೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಯ 19 ಮಂದಿ ದಾದಿ (ನರ್ಸ್)ಯರ ಮೊದಲ ತಂಡ ದಿಲ್ಲಿಗೆ ತೆರಳಿದೆ. ಸೋಮವಾರ ದ್ವಾರಕಾ ಆಸ್ಪತ್ರೆ ಆಡಳಿತ ಮಂಡಳಿ ನರ್ಸಿಂಗ್ ವೃತ್ತಿಪರರ ಆವಶ್ಯಕತೆಯ ಕೋರಿಕೆಯನ್ನು ಮಣಿಪಾಲ ದ್ವಾರಕಾ ಆಸ್ಪತ್ರೆ ನೀಡಿತ್ತು.