Thursday, August 11, 2022

Latest Posts

ಪುಣೆಗೆ ಹೊರಡಲು ಸಿದ್ಧವಾಗಿದ್ದ ವಿಮಾನದಲ್ಲಿ ಕೊರೋನಾ ಸೋಂಕಿತ: ಬಳಿಕ ಏನಾಯಿತು ಗೊತ್ತಾ?

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ದೆಹಲಿಯಿಂದ ಪುಣೆ ಟೇಕ್‌ ಆಫ್‌ಗೆ ಸಿದ್ಧವಾಗಿದ್ದ ವಿಮಾನದಲ್ಲಿ ಪ್ರಯಾಣಿಕರೊಬ್ಬರು ತಾನು ಕೋವಿಡ್ -19 ರೋಗಿಯೆಂದು ಹೇಳಿಕೊಂಡಿದ್ದು, ವಿಮಾನದಲ್ಲಿ ಭಾರೀ ಗದ್ದಲ ಉಂಟಾದ ಪ್ರಸಂಗ ಇಲ್ಲಿನ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಮಾರ್ಚ್ 4ರಂದು ಪ್ರಯಾಣಿಕರೊಬ್ಬರು ತಾನು ಪುಣೆಗೆ ಪ್ರಯಾಣಿಸುತ್ತಿದ್ದು, ತನಗೆ ಕೋವಿಡ್-19 ಪಾಸಿಟಿವ್ ಬಂದಿದೆ ಎಂದು ವಿಮಾನದಲ್ಲಿದ್ದ ಸಿಬ್ಬಂದಿಗೆ ಮಾಹಿತಿ ನೀಡಿದರು ಎಂದು ಇಂಡಿಗೊ ಅಧಿಕಾರಿಯೊಬ್ಬರು ಶುಕ್ರವಾರ ಎಎನ್‌ಐಗೆ ತಿಳಿಸಿದ್ದಾರೆ.
ಆತನ ಮಾತಿನಿಂದ ವಿಮಾನದ ಇನ್ನುಳಿದ ಪ್ರಯಾಣಿಕರಿಗೆ ಆತಂಕ ಶುರುವಾಗಿದೆ. ಹೀಗಾಗಿ ರನ್ ವೇ ನಲ್ಲಿದ್ದ ವಿಮಾನವನ್ನು ಪೈಲಟ್ ಮರಳಿ ಟ್ಯಾಕ್ಸಿ-ಬೇಗೆ ತಂದು ನಿಲ್ಲಿಸಿದರು. ಬಳಿಕ ಕೊರೋನಾ ಸೋಂಕಿತ ವ್ಯಕ್ತಿ ಸೇರಿದಂತೆ ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಲಾಯಿತು.
ನಂತರ ತನಗೆ ಕೊರೊನಾ ಪಾಸಿಟಿವ್ ಇತ್ತು ಎಂದು ಹೇಳಿಕೊಂಡಿದ್ದ ವ್ಯಕ್ತಿಯನ್ನು ವಿಮಾನ ನಿಲ್ದಾಣದ ವೈದ್ಯಕೀಯ ಕೇಂದ್ರಕ್ಕೆ ಕಳುಹಿಸಿದ್ದು, ಪರೀಕ್ಷೆ ನಡೆಸಲಾಯಿತು. ಆತನ ವರದಿ ಕೊರೊನಾ ಪಾಸಿಟಿವ್ ಎಂದು ಬಂದಿದೆ.
ಬಳಿಕ ವಿಮಾನವನ್ನು ಸಂಪೂರ್ಣ ಸಾನಿಟೈನ್ ಮಾಡಿ, ಸೀಟ್ ಕವರ್ಗಳನ್ನು ಸಹ ಬದಲಾಯಿಸಲಾಯಿತು. ಸುಮಾರು ಎರಡು ಗಂಟೆ ತಡವಾಗಿ ವಿಮಾನ ಟೇಕ್ ಆಫ್ ಆಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss