Monday, August 8, 2022

Latest Posts

ಕೊರೋನಾ ಲಸಿಕೆ ಪಡೆದ 107 ವರ್ಷದ ಭಾರತದ ಹಿರಿಯ ನಾಗರಿಕ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಭಾರತೀಯ ಸಂವಿಧಾನ ರಚನಾ ಸಮಿತಿಯ ಭಾಗವಾಗಿದ್ದ ಕೇವಲ್​ ಕೃಷ್ಣ (107) ಕೊರೋನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದು, ದೇಶದಲ್ಲಿ ಲಸಿಕೆ ಪಡೆದ ಅತ್ಯಂತ ಹಿರಿಯ ನಾಗರಿಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಬಗ್ಗೆ ಕೇವಲ್​ ಕೃಷ್ಣ ಅವರ ಮಗ ಅನಿಲ್​ ಕೃಷ್ಣ ಮಾತನಾಡಿದ್ದು, ಸಂವಿಧಾನ ಶಿಲ್ಪಿ ಡಾ. ಬಿ.ಆರ್.​ ಅಂಬೇಡ್ಕರ್​ ಜೊತೆ ನಮ್ಮ ತಂದೆ  ಕೆಲಸ ಮಾಡಿದ್ದರು ಎಂದು ತಿಳಿಸಿದ್ದಾರೆ.

ಮಾರ್ಚ್​ 2020ರಲ್ಲಿ ಲಾಕ್​ಡೌನ್​ ಆದೇಶ ಜಾರಿಯಾದ ಬಳಿಕ ಇದೇ ಮೊದಲ ಬಾರಿಗೆ ಕೇವಲ್​ ಕೃಷ್ಣ ಮನೆಯಿಂದ ಹೊರಬಂದಿದ್ದಾರೆ. ಇಲ್ಲಿಯವರೆಗೂ ಅವರನ್ನು ಮನೆಯಲ್ಲಿಯೇ ಸುರಕ್ಷಿತವಾಗಿ ಇರಿಸಿದ್ದೆವು ಎಂದು ಅನಿಲ್ ಕೃಷ್ಣ ತಿಳಿಸಿದ್ದಾರೆ.

ಕೊರೋನಾ ಲಸಿಕೆ ಸ್ವೀಕರಿಸದ ನಂತರ ಕೇವಲ್​ ಕೃಷ್ಣ ಆರೋಗ್ಯದಲ್ಲಿ ಯಾವುದೇ ಏರುಪೇರು ಆಗಿಲ್ಲ. ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss