Wednesday, August 17, 2022

Latest Posts

ಕೊರೋನಾ ರೂಪಾಂತರಿಗಳು ಗಾಳಿಯಲ್ಲಿ ಹರಡುವ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಿದೆ: ವರದಿ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಕೋವಿಡ್ ರೂಪಾಂತರಿಗಳು ರೋಗ ನಿರೋಧಕ ಶಕ್ತಿಯನ್ನೂ ಮೀರಿ ದೇಹದೊಳಗೆ ಸಕ್ರಿಯವಾಗುತ್ತಿವೆ ಎಂಬುದು ಈಗಾಗಲೇ ಪ್ರತಿಯೊಬ್ಬರಿಗೂ ಗೊತ್ತಿರುವ ವಿಷಯ. ಆದರೆ ಇದೀಗ ಮತ್ತೊಂದು ಸಂಗತಿಯನ್ನು ಅಮೆರಿಕದ ಯೂನಿವರ್ಸಿಟಿ ಆಫ್ ಮೇರಿಲ್ಯಾಂಡ್ ಅಧ್ಯಯನದ ವರದಿ ಬಹಿರಂಗ ಪಡಿಸಿದೆ.

ಮೇರಿಲ್ಯಾಂಡ್ ವರದಿ ಪ್ರಕಾರ, ಕೊರೋನಾದ ರೂಪಾಂತರಿಗಳು ಗಾಳಿಯಲ್ಲಿ ಹರಡುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ.

SARS-CoV-2 ನ ರೂಪಾಂತರಿಗಳು ಗಾಳಿಯಲ್ಲಿ ಉತ್ತಮವಾಗಿ ಹರಡುವ ಸಾಮರ್ಥ್ಯವನ್ನು ಹೊಂದುತ್ತಿವೆ . ಹಾಗಾಗಿ ಲಸಿಕೆ ಪಡೆಯುವುದರ ಜೊತೆ ಮಾಸ್ಕ್ ಕೂಡ  ಬಿಗಿಯಾಗಿ ಧರಿಸಬೇಕು. ತಾಜಾ ಗಾಳಿ ಬರುವ ವಾತಾವರಣವನ್ನು ನಿರ್ಮಿಸಿಕೊಂಡರೆ ಮಾತ್ರ ಕೋವಿಡ್  ಸೋಂಕಿನಿಂದ ಕಾಪಾಡಿಕೊಳ್ಳಬಹುದು ಎಂದು ಮೇರಿಲ್ಯಾಂಡ್ ನಲ್ಲಿ ನಡೆದ ಅಧ್ಯಯನದಲ್ಲಿ ಹೇಳಲಾಗಿದೆ.

ಡೆಲ್ಟಾ ರೂಪಾಂತರಿ ಆಲ್ಫಾ ರೂಪಾಂತರಿಗಿಂತಲೂ ವೇಗವಾಗಿ ಹೆಚ್ಚು ಜನರಿಗೆ ತಗುಲುತ್ತದೆ. ಮೂಗಿನ ಸ್ವ್ಯಾಬ್ ಮತ್ತು ಲಾಲಾರಸದ ಮೂಲಕ ಹರಡುವುದಕ್ಕಿಂತ ಗಾಳಿಯಲ್ಲಿ ಹರಡುವ ಈ ಡೆಲ್ಟಾ  ರೂಪಾಂತರಿ ಆಲ್ಫಾ ರೂಪಾಂತರಿಗಿಂತಲೂ 18 ಪಟ್ಟು ಹೆಚ್ಚಾಗಿರುತ್ತದೆ ಎಂದು ವರದಿ ಎಚ್ಚರಿಸಿದೆ.

ಕೊರೋನಾ ಸೋಂಕಿಗೆ ಒಳಗಾದವರು ಉಸಿರಾಡುವ ಗಾಳಿಯಲ್ಲಿ 43-100 ಪಟ್ಟು ವೈರಾಣುಗಳಿರುತ್ತವೆ. ಅದೇ ಗಾಳಿಯಿಂದ ಬೇರೆಯವರಿಗೆ ಹರಡುವ ಸಾಧ್ಯತೆಗಳು ಹೆಚ್ಚಿರುತ್ತವೆ ಎಂದು ತಿಳಿಸಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!