Tuesday, August 16, 2022

Latest Posts

ಒಂದೇ ಶಾಲೆಯ 15 ಮಕ್ಕಳಿಗೆ ಕೊರೋನಾ ದೃಢ: ಮತ್ತೆ ಆತಂಕದಲ್ಲಿ ಜನ

ಹೊಸ ದಿಗಂತ ವರದಿ ಕಲಬುರಗಿ

ಜಿಲ್ಲೆಯಲ್ಲಿ ಮತ್ತೆ ಕೊರೊನಾ ಆರ್ಭಟಿಸಿದೆ. ಕಾಳಗಿ ಪಟ್ಟಣದ ಸರ್ಕಾರಿ ಪ್ರೌಢಶಾಲೆಯ 15 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

9 ಮತ್ತು 10ನೇ ತರಗತಿಯ 15 ವಿದ್ಯಾರ್ಥಿಗಳಿಗೆ ಕೊರೊನಾ ದೃಢಪಟ್ಟಿದ್ದು, ಸೋಂಕಿತ ಮಕ್ಕಳು ಕಾಳಗಿ ಪಟ್ಟಣ ಹಾಗು ಸುತ್ತಮುತ್ತಲಿನ ಗ್ರಾಮದ ನಿವಾಸಿಗಳಾಗಿದ್ದಾರೆ. ಸೋಂಕಿತರಲ್ಲಿ ಆತಂಕಕಾರಿ ಲಕ್ಷಣಗಳು ಕಂಡುಬಂದಿದ ಕಾರಣ ಚಿಕಿತ್ಸೆ ನಂತರ ವಿದ್ಯಾರ್ಥಿಗಳನ್ನು ಮನೆಯಲ್ಲಿಯೇ ಐಸೋಲೇಷನ್ ಲ್ಲಿ ಇರಿಸಲಾಗಿದೆ.

ಮಾರ್ಚ್ 1ರಂದು 22 ಮಕ್ಕಳಿಗೆ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಇದೀಗ ಟೆಸ್ಟ್ ನ ಫಲಿತಾಂಶ ಬಂದಿದ್ದು, 22 ಮಕ್ಕಳ ಪೈಕಿ 15 ಮಕ್ಕಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸೋಮವಾರದವರಗೆ ಶಾಲೆಗೆ ರಜೆ ಘೋಷಣೆ ಮಾಡಿ ಕಾಳಗಿ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ.

ಸಮೀಪದ ಗ್ರಾಮವೊಂದರಲ್ಲಿ ಮದುವೆ ಕಾರ್ಯಕ್ರಮವೊಂದು ನಡೆದಿದ್ದು, ಮದುವೆಯಲ್ಲಿ ಮುಂಬೈನಿಂದ ಬಂದ ಹೆಚ್ಚಿನ ಜನ ಭಾಗವಹಿಸಿದ್ದರು. ಇದೇ ಮದುವೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಅವರಿಂದಲೇ ಸೋಂಕು ಹರಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಶಾಲೆಯ 41 ವಿದ್ಯಾರ್ಥಿಗಳ ಟೆಸ್ಟ್ ರಿಪೋರ್ಟ್ ಬಾಕಿ ಉಳಿದಿದ್ದು, ಆತಂಕ ಹೆಚ್ಚಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss