Saturday, July 2, 2022

Latest Posts

ಕ್ರುನಾಲ್ ಪಾಂಡ್ಯಗೆ ಕೊರೋನಾ ಪಾಸಿಟಿವ್: ಜುಲೈ 28ಕ್ಕೆ 2ನೇ ಟಿ-20 ಪಂದ್ಯ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಟೀಂ ಇಂಡಿಯಾ ಆಟಗಾರನಲ್ಲಿ ಕೊರೋನಾ ಸೋಂಕು ಪ್ರಕರಣ ಕಂಡುಬಂದ ಬಳಿಕ ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟಿ 20 ಪಂದ್ಯವನ್ನು ಮುಂದೂಡಲಾಗಿದೆ. ಸುದ್ದಿ ಸಂಸ್ಥೆ ಎಎನ್‌ಐ ವರದಿಯ ಪ್ರಕಾರ, ಉಳಿದ ಎಲ್ಲ ಆಟಗಾರರ ವರದಿಗಳು ನೆಗೆಟಿವ್ ಬಂದರೆ, ಜುಲೈ 28 ರ ಬುಧವಾರದಂದು ಪಂದ್ಯವನ್ನು ಆಡಬಹುದು. ಈ ಸರಣಿಯನ್ನು ಪ್ರೇಕ್ಷಕರ ಉಪಸ್ಥಿತಿಯಿಲ್ಲದೆ ಬಯೋಬಬಲ್​ನಲ್ಲಿ ಆಡಲಾಗುತ್ತಿದೆ.
ಬಿಸಿಸಿಐಹೇಳಿಕೆ ನೀಡಿ, ಕ್ರುನಾಲ್ ಪಾಂಡ್ಯಕ್ಕೆ ವೈರಸ್ ಸೋಂಕು ತಗುಲಿದ್ದು, ಈ ಕಾರಣದಿಂದ ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟಿ 20 ಪಂದ್ಯವನ್ನು ಮುಂದೂಡಲಾಗಿದೆ ಹಾಗೂ ಜುಲೈ 28 ರಂದು ಪಂದ್ಯವನ್ನು ಮರು ಆಯೋಜಿಸಲಾಗಿದೆ. 3ನೇ ಟಿ-20 ಪಂದ್ಯದ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ನಿಗದಿಯಂತೆ ಜುಲೈ 29 ರಂದು 3ನೇ ಟಿ-20 ಪಂದ್ಯ ನಡೆಯಲಿದೆ.
ಪಂದ್ಯದ ಮೊದಲು ಮಂಗಳವಾರ ಬೆಳಿಗ್ಗೆ ಕ್ಷಿಪ್ರ ಆಂಟಿಜೆನ್ ಪರೀಕ್ಷೆಯನ್ನು ಮಾಡಲಾಗಿದ್ದು, ಇದರಲ್ಲಿ ಕ್ರುನಾಲ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಮಂಡಳಿ ತಿಳಿಸಿದೆ. ಅದೇ ಸಮಯದಲ್ಲಿ, ವೈದ್ಯಕೀಯ ತಂಡವು ಇತರ 8 ಸದಸ್ಯರನ್ನು ಕ್ರುನಾಲ್ ಅವರ ನಿಕಟ ಸಂಪರ್ಕದಲ್ಲಿದ್ದರು ಎಂದು ಗುರುತಿಸಿದೆ. ಪ್ರಸ್ತುತ, ಇಡೀ ತಂಡದ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಮಾಡಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss