ಮಲಯಾಳಂನ ಸೂಪರ್ ಸ್ಟಾರ್ ಮಮ್ಮುಟಿಗೆ ಕೊರೋನಾ ಪಾಸಿಟಿವ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜನಪ್ರತಿನಿಧಿಗಳು, ಸ್ಟಾರ್ ನಟರನ್ನು ಬಿಡದೇ ಕಾಡುತ್ತಿರುವ ಕೊರೋನಾ ಇದೀಗ ಮಲಯಾಳಂನ ಸೂಪರ್ ಸ್ಟಾರ್ ಮಮ್ಮುಟಿಯವರಿಗೂ ದೃಢಪಟ್ಟಿದೆ.
ಹೀಗಾಗಿ ಅವರ ನಟನೆಯ ಸಿನಿಮಾದ ಮುಂದಿನ ಚಿತ್ರೀಕರಣಗಳನ್ನು ಮುಂದೂಡಲಾಗಿದೆ. ಅಲ್ಲದೇ ಸಿಬಿಐ 5 ಚಿತ್ರದ ಶೂಟಿಂಗ್ ಕೂಡ ಮುಂದೂಡಿಕೆ ಮಾಡಲಾಗಿದೆ.
ಕೆ.ಮಧು ನಿರ್ದೇಶನದ ಚಲನಚಿತ್ರ ಫ್ರಾಂಚೈಸ್ ‘ಸಿಬಿಐ 5’ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ.
ಅವರ ಆರೋಗ್ಯದ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. ಮಮ್ಮುಟ್ಟಿ ಶೀಘ್ರ ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಶುಭ ಕೋರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!