Thursday, August 11, 2022

Latest Posts

ಹಿಮಾಚಲದ ಬೌದ್ಧ ವಿಹಾರದ 150ಕ್ಕೂ ಹೆಚ್ಚು ಸನ್ಯಾಸಿಗಳಿಗೆ ಕೊರೋನಾ ಪಾಸಿಟಿವ್

ಹೊಸದಿಗಂತ ಆನ್ ಲೈನ್ ಡೆಸ್ಕ್:

ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿರುವ ಗ್ಯುಟೊ ತಾಂತ್ರಿಕ ಮೊನೆಸ್ಟ್ರಿಯಲ್ಲಿರುವ 150ಕ್ಕೂ ಹೆಚ್ಚು ಸನ್ಯಾಸಿಗಳಿಗೆ ಕೊರೋನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ.
ಓರ್ವ ಸನ್ಯಾಸಿ ಸ್ಥಿತಿ ಗಂಭೀರವಾಗಿದ್ದು, ತಾಂಡಾ ಮೆಡಿಕಲ್ ಕಾಲೇಜಿಗೆ ಸೇರಿಸಲಾಗಿದೆ. ಇಡೀ ಬೌದ್ಧ ವಿಹಾರವನ್ನು ಕಂಟೇನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಎಲ್ಲರಿಗೂ ಐಸೊಲೇಷನ್‌ನಲ್ಲಿರುವಂತೆ ಸೂಚಿಸಲಾಗಿದೆ. ಇಲ್ಲಿಗೆ ಯಾರೂ ಬರದಂತೆ ಹಾಗೂ ಯಾರೂ ಹೊರ ಹೋಗದಂತೆ ನಿರ್ಬಂಧ ವಿಧಿಸಲಾಗಿದೆ ಎಂದು ಕಂಗ್ರಾ ಮುಖ್ಯ ವೈದ್ಯಾಧಿಕಾರಿ ಗುರುದರ್ಶನ್ ಗುಪ್ತಾ
ಇಲ್ಲಿನ ಕಾಂಗ್ರಾ ಜಿಲ್ಲೆಯಲ್ಲಿ ಇದುವರೆಗೆ 300ಕ್ಕೂ ಹೆಚ್ಚು ಸನ್ಯಾಸಿಗಳು ಪಾಸಿಟಿವ್ ಪರೀಕ್ಷೆ ನಡೆಸಿದ್ದಾರೆ. . ಅದರಲ್ಲಿ 154 ಸನ್ಯಾಸಿಗಳಲ್ಲಿ ಕೋರೋನಾ ಸೋಂಕು ದೃಢಪಟ್ಟಿದೆ. ಸೋಂಕು ದೃಢಪಟ್ಟಿರುವ ಹಲವು ಹೊಸ ವರ್ಷಾಚರಣೆ ಸಂದರ್ಭ ಕರ್ನಾಟಕ ಹಾಗೂ ದೆಹಲಿಯಿಂದ ಬಂದಿದ್ದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಹುಪಾಲು ಸನ್ಯಾಸಿಗಳಿಗೆ ಯಾವುದೇ ಲಕ್ಷಣವಿಲ್ಲದೇ ಸೋಂಕು ಕಾಣಿಸಿಕೊಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss