ಬಾಲಿವುಡ್​ ನಟ ಕಾರ್ತಿಕ್​ ಆರ್ಯನ್​​​ ಗೆ ಕೊರೋನಾ ಪಾಸಿಟಿವ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಿವುಡ್​ ನಟ ಕಾರ್ತಿಕ್​ ಆರ್ಯನ್​​​ ಗೆ ಕೊರೋನಾ ಸೋಂಕು ದೃಢವಾಗಿದೆ.
ಈ ಕುರಿತು ಸ್ವತಃ ಅವರೇ ತಮ್ಮ ಅಭಿಮಾನಿಗಳಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಕೊರೋನಾದಿಂದ ದೂರವಿರಿ, ಎಚ್ಚರಿಕೆ ವಹಿಸಿ ಎಂದು ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ತಮ್ಮ ನಟನೆಯ ಭೂಲ್​ ಭುಲಯ್ಯಾ 2 ಚಿತ್ರ ಯಶಸ್ಸಿನ ನಡುವೆ ಕಾರ್ತಿಕ್​ ಈಗ ತಮ್ಮ ಮನೆಯಲ್ಲೇ ಹೋಂ ಕ್ವಾರಂಟೈನ್​ ಆಗಿದ್ದಾರೆ.ಇತ್ತೀಚೆಗೆ ಉತ್ತರ ಭಾರತದಾದ್ಯಂತ ಚಿತ್ರ ಪ್ರಚಾರದಲ್ಲಿ ಕೈಗೊಂಡಿದ್ದ ವೇಳೆ ಅವರಿಗೆ ಈ ಸೋಂಕು ತಗುಲಿದೆ ಎನ್ನಲಾಗಿದೆ.
ಇತ್ತೀಚೆಗೆ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಅವರಿಗೆ ಕೋವಿಡ್​ ಸೋಂಕು ತಗುಲಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!