ಹೊಸದಿಗಂತ ಆನ್ ಲೈನ್ ಡೆಸ್ಕ್:
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಓಪನರ್ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ಗೆ ಕೊರೋನಾ ಸೋಂಕು ತಗುಲಿದೆ. ಇದರಿಂದ ತಂಡಕ್ಕೆ ದೊಡ್ಡ ಹೊಡೆತಬಿದ್ದಂತಾಗಿದೆ.
ದೇವದತ್ ಪಡಿಕ್ಕಲ್ ಎಲ್ಲಾ ಕೊರೋನಾ ಪ್ರೋಟೋಕಾಲ್ಗಳನ್ನು ಅನುಸರಿಸುತ್ತಿದ್ದು, ಐಸೋಲೇಟ್ ಆಗಿದ್ದಾರೆ ಎಂದು ಆರ್ಸಿಬಿ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಬಿಸಿಸಿಐ ಎಸ್ಒಪಿ ಪ್ರಕಾರ, ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಬಂದವರು, ಮಾದರಿ ತೆಗೆದುಕೊಂಡ ದಿನದಿಂದ 10 ದಿನಗಳ ಕಾಲ ಬಯೋಸೆಕ್ಯೂರ್ ಹೊರಗೆ 10 ದಿನಗಳ ಐಸೋಲೇಶನ್ಗೆ ಒಳಗಾಗಬೇಕಿದೆ. ಈ ಅವಧಿಯಲ್ಲಿ ಯಾವುದೇ ಚಟುವಟಿಕೆಗೊಳಗಾಗದೆ ವಿಶ್ರಾಂತಿಯಲ್ಲಿರಬೇಕು. ತಂಡದ ವೈದ್ಯರು ಸೋಂಕಿತನನ್ನು ನಿರಂತರ ವೀಕ್ಷಣೆ ಮಾಡುತ್ತಿರಬೇಕು. ಒಂದು ವೇಳೆ ಸೋಂಕಿತನ ಸ್ಥಿತಿ ಗಂಭೀರ ಎನಿಸಿದರೆ ತಕ್ಷಣ ಆಸ್ಪತ್ರೆಗೆ ಸೇರಿಸಬೇಕಾಗಿದೆ.