ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಗುಜರಾತ್ನ ಆರೋಗ್ಯ ಅಧಿಕಾರಿಯೊಬ್ಬರು ಕೊರೋನ ಲಸಿಕೆಯ ಎರಡನೇ ಡೋಸ್ ತೆಗೆದುಕೊಂಡ ಬಳಿಕ ಕೊರೋನ ಸೋಂಕಿಗೆ ಒಳಗಾಗಿದ್ದಾರೆ.
ಗಾಂಧಿನಗರದ ದೆಹ್ಗಾಮ್ ತಾಲೂಕಿನ ಆರೋಗ್ಯಾಧಿಕಾರಿಯಾಗಿರುವ ಈ ವ್ಯಕ್ತಿ ಜನವರಿ 16ರಂದು ಮೊದಲ ಡೋಸ್ ಕೊರೋನಾ ಲಸಿಕೆಯನ್ನು ಪಡೆದಿದ್ದರು. ಫೆಬ್ರವರಿ 15ರಂದು ಎರಡನೇ ಡೋಸ್ ಲಸಿಕೆ ಪಡೆದಿದ್ದರು.
ನಂತರ ಅವರಿಗೆ ಜ್ವರ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಫೆಬ್ರವರಿ 20ರಂದು ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ಗಾಂಧಿನಗರದ ಮುಖ್ಯ ಆರೋಗ್ಯಾಧಿಕಾರಿ ಡಾ. ಎಂ.ಎಚ್. ಸೋಲಂಕಿ ತಿಳಿಸಿದ್ದಾರೆ.
ಅವರು ಮನೆಯಲ್ಲಿ ಐಸೋಲೇಶನ್ನಲ್ಲಿ ಇದ್ದಾರೆ. ಅವರಿಗೆ ಕೊರೋನದ ಲಘು ಲಕ್ಷಣಗಳಿವೆ. ಸೋಮವಾರ ಕರ್ತವ್ಯಕ್ಕೆ ಹಾಜರಾಗಲು ತಾನು ಸಮರ್ಥನಾಗಿದ್ದೇನೆ ಎಂದು ಅವರು ತಿಳಿಸಿದ್ದಾರೆ ಎಂದು ಸೋಲಂಕಿ ತಿಳಿಸಿದ್ದಾರೆ.