ಹೊಸದಿಗಂತ ಆನ್ ಲೈನ್ ಡೆಸ್ಕ್:
ರಾಷ್ಟ್ರ ರಾಜಧಾನಿಯಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದು, ಈ ಕುರಿತು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಕಳೆದ 24 ಗಂಟೆಗಳಲ್ಲಿ ಕೊರೋನಾ ಪಾಸಿಟಿವಿಟಿ ಪ್ರಮಾಣ ಶೇಕಡ 30ಕ್ಕೆ ಏರಿದೆ ಎಂದರು.
ವೇಗವಾಗಿ ಪ್ರಕರಣಗಳು ಜಾಸ್ತಿಯಾಗ್ತಿವೆ. ರೋಗಿಗಳು ಹೆಚ್ಚಾಗ್ತಿರುವ ಕಾರಣ ಬೇಗನೆ ಹಾಸಿಗೆಗಳು ಫಿಲ್ ಆಗ್ತಿವೆ. ದೆಹಲಿಯಲ್ಲಿ ಈಗ 100ಕ್ಕೂ ಕಡಿಮೆ ಐಸಿಯು ಬೆಡ್ಗಳು ಮಾತ್ರ ಲಭ್ಯವಿದೆ. ಆಕ್ಸಿಜನ್ ಕೊರತೆ ಕೂಡ ಎದುರಾಗಿದೆ ಎಂದು ಅವರು ತಿಳಿಸಿದರು.
ನಾವು ಕೇಂದ್ರ ಸರ್ಕಾರದ ನೆರವು ಕೇಳಿದ್ದೇವೆ. ಅಗತ್ಯ ನೆರವು ಸಿಗುತ್ತಿದೆ. ಹಾಸಿಗೆಗಳ ಅಗತ್ಯತೆ ಇದೆ ಅಂತ ನಾನು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹಾಗೂ ಗೃಹಸಚಿವ ಅಮಿತ್ ಶಾ ಅವರನ್ನ ಕೇಳಿದ್ದೇನೆ. ದೆಹಲಿಯಲ್ಲಿ, ಕೇಂದ್ರ ಸರ್ಕಾರ ಒಟ್ಟು 10,000 ಹಾಸಿಗೆಗಳನ್ನು ಹೊಂದಿದ್ದು, ಅದರಲ್ಲಿ ಕೇವಲ 1,800 ಹಾಸಿಗೆಗಳು ಮಾತ್ರ ಕೊರೋನಾ ರೋಗಿಗಳಿಗೆ ಇದೆ. ಕನಿಷ್ಠ 7,000 ಬೆಡ್ಗಳನ್ನ ಕೊರೋನಾ ರೋಗಿಗಳಿಗೆ ಮೀಸಲು ಇಡಬೇಕೆಂದು ಮನವಿ ಮಾಡುತ್ತೇನೆ ಎಂದು ಹೇಳಿದರು.