ಕೊರೋನಾ ವರದಿ| ದೇಶದಾದ್ಯಂತ 15,528 ಕೇಸ್‌ ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕಳೆದ ಕೆಲ ದಿನಗಳಿಗೆ ಹೋಲಿಕೆ ಮಾಡಿದರೆ ಕೊರೋನಾ ಸೋಂಕಿನ ಪ್ರಮಾಣದಲ್ಲಿ ಕೊಂಚ ಇಳಿಮುಖವಾಗಿದ್ದು ದೇಶದಾದ್ಯಂತ ಒಟ್ಟಾರೆ 15,528 ಹೊಸ ಕೇಸ್‌ ಪತ್ತೆಯಾಗಿದೆ.

ಆರೋಗ್ಯಸಚಿವಾಲಯದ ಮಾಹಿತಿ ಪ್ರಕಾರ ಸಕ್ರಿಯ ಕೋವಿಡ್‌ ಪ್ರಕರಣಗಳ ಸಂಖ್ಯೆ 1,43,654ರಷ್ಟಿದ್ದು ದೈನಂದಿನ ಪಾಸಿಟಿವಿಟಿದರವು 3.32% ದಷ್ಟಿದೆ. ವಾರದ ಪಾಸಿಟಿವಿಟಿ ದರವು 4.57% ದಷ್ಟಿದೆ. ಒಟ್ಟೂ 16,113 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದು ಚೇತರಿಕಾ ದರವು 98.47% ದಷ್ಟಿದೆ.

ಒಟ್ಟೂ 200.33ಕೋಟಿ ಲಸಿಕೆ ನೀಡಲಾಗಿದ್ದು ಕಳೆದ 24 ಗಂಟೆಯಲ್ಲಿ 27,78,013 ಕೊವಿಡ್‌ ಲಸಿಕೆ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!